ಕಡಬ: ಇಂಜಿನಿಯರಿಂಗ್ ಪದವೀಧರೆ ಯುವತಿ ಅಸೌಖ್ಯದಿಂದ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಮಾ.21. ಅನಾರೋಗ್ಯದಿಂದ ಬಳಲುತ್ತಿದ್ದ ಇಂಜಿನಿಯರ್ ಪದವೀಧರೆ ಯುವತಿ ಶನಿವಾರದಂದು ಮೃತಪಟ್ಟಿದ್ದಾರೆ.

ಮೃತ ಯುವತಿಯನ್ನು ಕಡಬ ತಾಲೂಕು ಪಿಜಕ್ಕಳದ ಕಲ್ಲರ್ಪೆ ನಿವಾಸಿ ಪುಟ್ಟಣ್ಣ ಗೌಡರ ಪುತ್ರಿ ವೀಕ್ಷಿತಾ(27) ಎಂದು ಗುರುತಿಸಲಾಗಿದೆ. ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಇನ್ಫೋಸಿಸ್ ನಲ್ಲಿ ಅಮೇರಿಕಾ, ಬೆಂಗಳೂರು ನಲ್ಲಿ ಉದ್ಯೋಗ ಮಾಡುತ್ತಿದ್ದ ವೀಕ್ಷಿತಾ ಅನಾರೋಗ್ಯದ ಹಿನ್ನಲೆಯಲ್ಲಿ ಕಳೆದೆರಡು ವರ್ಷಗಳಿಂದ ಮನೆಯಲ್ಲಿದ್ದರು ಎನ್ನಲಾಗಿದೆ. ಮೃತರು ತಾಯಿ ಯಶೋಧಾ, ಸಹೋದರಿಯರಾದ ಅಕ್ಷತಾ, ರಕ್ಷಿತಾ ಅವರನ್ನು ಅಗಲಿದ್ದಾರೆ.

Also Read  ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಮೃತ್ಯು..!

error: Content is protected !!
Scroll to Top