ಇಚಿಲಂಪಾಡಿ: ಸ್ನಾನಕ್ಕೆಂದು ತೆರಳಿದ್ದ ಇಬ್ಬರು ನೀರಿನಲ್ಲಿ ಕಣ್ಮರೆ ➤ ಓರ್ವನ ಮೃತದೇಹ ಪತ್ತೆ



ಸಾಂದರ್ಭಿಕ ಚಿತ್ರ





(ನ್ಯೂಸ್ ಕಡಬ) newskadaba.com ಕಡಬ, ಮಾ.20. ಸ್ನಾನಕ್ಕೆಂದು ತೆರಳಿದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಕಣ್ಮರೆಯಾಗಿರುವ ಘಟನೆ ಶುಕ್ರವಾರ ಸಂಜೆ ಇಚಿಲಂಪಾಡಿಯಲ್ಲಿ ನಡೆದಿದೆ.






ನಾಪತ್ತೆಯಾಗಿರುವ ಯುವಕರನ್ನು ಇಚಿಲಂಪಾಡಿ ಸಮೀಪದ ಕೊರಮೇರು ನಿವಾಸಿಗಳಾದ ವೆಂಕಟೇಶ್ ಹಾಗೂ ಗುರುನಂದನ್ ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಇಚಿಲಂಪಾಡಿ ಸಮೀಪದ ಕೊರಮೇರು ಬದನೆಗುಂಡಿ ಎಂಬಲ್ಲಿ ಸ್ನಾನಕ್ಕೆಂದು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಓರ್ವನ ಮೃತದೇಹ ಪತ್ತೆಯಾಗಿದ್ದು, ಮತ್ತೋರ್ವನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

error: Content is protected !!
Scroll to Top