ಕಾಸರಗೋಡು: ಒಂದೇ ದಿನ 6 ಮಂದಿಗೆ ಕೊರೋನ ಪಾಸಿಟಿವ್

  • ಜಿಲ್ಲೆಯಲ್ಲಿ ಕೊರೋನ ಪೀಡಿತರ ಸಂಖ್ಯೆ 9ಕ್ಕೇರಿಕೆ

ಕಾಸರಗೋಡು, ಮಾ.20: ಜಿಲ್ಲೆಯಲ್ಲಿ ಕೊರೋನ ಸೋಂಕು ಪೀಡಿತರ ಸಂಖ್ಯೆ 9ಕ್ಕೇರಿದೆ. ಶುಕ್ರವಾರ ಒಂದೇ ದಿನ 6 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಕೊರೋನ ಶಂಕಿತರು ಕಾಸರಗೋಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ 6 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರ ಪರೀಕ್ಷಾ ವರದಿ ಶುಕ್ರವಾರ ಬಂದಿದ್ದು, ಇದರಲ್ಲಿ 6 ಮಂದಿಯ ವರದಿ ಕೊರೋನ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ತಿಳಿಸಿದ್ದಾರೆ.

ಮಾ.19ರಂದು ಕಾಸರಗೋಡು ನಗರದ ಹೊರವಲಯದ ವ್ಯಕ್ತಿಯೋರ್ವರಲ್ಲಿ ದೃಢಪಟ್ಟಿದ್ದ ಕೊರೋನ ಸೋಂಕು, ಗುರುವಾರದ ತನಕ ಒಟ್ಟು 3 ಮಂದಿಯಲ್ಲಿ ದೃಢಪಟ್ಟಿತ್ತು. ಇದೀಗ ಮತ್ತೆ 6 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದ್ದು, ಒಟ್ಟು 9 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ.

Also Read  ಪಂಜ: ಅರಣ್ಯ ಇಲಾಖೆಯ ಪ್ರೊಬೆಷನರಿ ವಲಯ ಅರಣ್ಯಾಧಿಕಾರಿಯಾಗಿ ಪ್ರಮೋದ್ ಎಣ್ಣೆಮಜಲು ಕರ್ತವ್ಯಕ್ಕೆ ಹಾಜರು

error: Content is protected !!
Scroll to Top