ಕೊರೋನ ಭೀತಿ ಹಿನ್ನೆಲೆ: ಮನಪಾ ವ್ಯಾಪ್ತಿಯ ಎಲ್ಲ ಸೆಲೂನ್, ಬ್ಯೂಟಿ ಪಾರ್ಲರ್ ನಾಳೆಯಿಂದ ಬಂದ್

ಮಂಗಳೂರು, ಮಾ.20: ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ಮಾರಣಾಂತಿಕ ಸೋಂಕು ವೈರಾಣು ರಾಜ್ಯದಲ್ಲಿಯೂ ಕಾಣಿಸಿಕೊಂಡಿರುವುದರಿಂದ ಈ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯೊಳಗೆ ಕಾರ್ಯಚರಿಸುವ ಎಲ್ಲಾ ಸೆಲೂನ್, ಬ್ಯೂಟಿ ಪಾರ್ಲರ್‌ಗಳನ್ನು ಮಾ.21ರಿಂದ ಮುಂದಿನ ಆದೇಶದವರೆಗೂ ತಾತ್ಕಾಲಿಕವಾಗಿ ಮುಚ್ಚುವಂತೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.

ಈ ಕುರಿತು ಎಲ್ಲಾ ಸೆಲೂನ್, ಬ್ಯೂಟಿ ಪಾರ್ಲರ್ ಅಸೋಸಿಯೇಷನ್‌ಗಳು ಗಮನಹರಿಸಿ ಮಾ.21ರಿಂದ ಸೆಲೂನ್, ಬ್ಯೂಟಿ ಪಾರ್ಲರ್‌ಗಳನ್ನು ಮುಚ್ಚಿ ಪಾಲಿಕೆಯೊಂದಿಗೆ ಸಹಕರಿಸಬೇಕೆಂದು ಮನಪಾ ಆಯುಕ್ತರು ಹೇಳಿದ್ದಾರೆ.

Also Read  'ರಾಜ್ಯದ ಸ್ವಚ್ಛ ಗ್ರಾಮ' ಖ್ಯಾತಿಯ ಕಡಬದಲ್ಲೀಗ ಮರೀಚಿಕೆಯಾಗಿರುವ ಸ್ವಚ್ಛತೆ ► ಬಯಲು ಶೌಚದ ದುರ್ನಾಥದಿಂದ ಮೂಗು ಮುಚ್ಚಿಕೊಂಡು ತೆರಳಬೇಕಾದ ಅನಿವಾರ್ಯತೆ

error: Content is protected !!
Scroll to Top