ಕೊರೋನ ವೈರಸ್ ಹಿನ್ನೆಲೆ ಮಸೀದಿಗಳಲ್ಲಿ ಶುಕ್ರವಾರದ ನಮಾಝ್ ಸಮಯ ಮಾರ್ಪಾಡು

ಮಂಗಳೂರು, ಮಾ.20: ಕೊರೋನ ವೈರಸ್ ಭೀತಿಯಿಂದ ಸರಕಾರವು ನಿರ್ಬಂಧಕಾಜ್ಞೆ ವಿಧಿಸಿದ ಹಿನ್ನೆಲೆಯಲ್ಲಿ ಕರಾವಳಿಯ ಮಸೀದಿಗಳಲ್ಲಿ ಶುಕ್ರವಾರದ ನಮಾಝ್‌ನ ಸಮಯದಲ್ಲಿ ಮಾರ್ಪಾಡು ಮಾಡಲಾಗಿದೆ.

ಆರೋಗ್ಯ ಸುರಕ್ಷತೆಯ ನಿಟ್ಟಿನಲ್ಲಿ ಮಂಗಳೂರು ನಗರ ಮತ್ತು ಹೊರವಲಯದ ಕೆಲವು ಮಸೀದಿಗಳಲ್ಲಿ ಶುಕ್ರವಾರದ ಜುಮಾ ನಮಾಝ್‌ನ ಸಮಯದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಶುಕ್ರವಾರ ನಡೆಯುವ ನಮಾಜಝ್ 15 ನಿಮಿಷದಲ್ಲಿ ಮುಗಿಸಲು ಉಭಯ ಜಿಲ್ಲೆಯ ಖಾಝಿಗಳು ಈಗಾಗಲೆ ಮನವಿ ಮಾಡಿದ್ದಾರೆ.

ಮಂಗಳೂರಿನ ಮಸೀದಿಗಳಲ್ಲಿ ಲುಹರ್ ಅಝಾನ್ ಮುಳಗಿದ ತಕ್ಷಣವೇ ಖುತುಬಾ 12:55ಕ್ಕೆ ನಮಾಝ್ ನಿರ್ವಹಿಸುವುದು. ದೀರ್ಘಕಾಲದ ದುಆನ್ನು ಕಡಿತಗೊಳಿಸುವುದು. ಕೇವಲ 15 ನಿಮಿಷಗಳಲ್ಲಿ ನಮಾಝ್ ಮುಗಿಸಿ ತಕ್ಷಣ ಮಸೀದಿಯಿಂದ ಮರಳುವಂತೆ ಉಭಯ ಜಿಲ್ಲೆಯ ಖಾಝಿಗಳು ನಿರ್ದೇಶಿಸಿದ್ದಾರೆ.

Also Read  ಪಾಲ್ತಾಡು: ವ್ಯಕ್ತಿಯ ಅಪಹರಿಸಿ ಹಲ್ಲೆಗೈದ ಪ್ರಕರಣ ► ಮೂವರು ಆರೋಪಿಗಳ ಬಂಧನ

 

error: Content is protected !!
Scroll to Top