ಸರಕಾರಿ ಶಾಲೆಯ ಅಭಿವೃದ್ಧಿ ಬಗ್ಗೆ ದಿನಪತ್ರಿಕೆಯಲ್ಲಿ ಲೇಖನ ➤ ಕಡಬದ ಶಿಕ್ಷಕರಿಗೆ ಬಂತು ಶಿಕ್ಷಣ ಸಚಿವರಿಂದ ಬುಲಾವ್

(ನ್ಯೂಸ್ ಕಡಬ) newskadaba.com ಕಡಬ, ಮಾ.19. ಕಡಬ ತಾಲೂಕು ಓಂತ್ರಡ್ಕ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕ ದಿಲೀಪ್ ಕುಮಾರ್ ಸಂಪಡ್ಕ ಅವರು ಬರೆದ ಲೇಖನವೊಂದು ದಿನಪತ್ರಿಕೆಯಲ್ಲಿ ಪ್ರಕಟವಾದ ಸಂಬಂಧ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗುರುವಾರದಂದು ದೂರವಾಣಿ ಮುಖಾಂತರ ಶಿಕ್ಷಕರೊಂದಿಗೆ ವಿಶ್ಲೇಷಿಸಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿಗಾಗಿ ಕ್ಯೂ ನಿಲ್ಲುವ ಸನ್ನಿವೇಶ ಸೃಷ್ಟಿಯಾಗಬೇಕು ಎನ್ನುವ ಆಶಯವನ್ನು ಇತ್ತೀಚೆಗೆ ಸಚಿವರು ವ್ಯಕ್ತಪಡಿಸಿದ್ದರು. ದಾಖಲಾತಿಗಾಗಿ ಕ್ಯೂ ನಿಲ್ಲಬೇಕು ಎನ್ನುವ ವಿಚಾರದಲ್ಲಿ ಪತ್ರಿಕೆಯೊಂದರಲ್ಲಿ ದಿಲೀಪ್ ಬರೆದ ಲೇಖನ ಪ್ರಕಟವಾಗಿರುವುದನ್ನು ಕಂಡು ದೂರವಾಣಿ ಕರೆ ಮಾಡಿ ಲೇಖನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಯ ಬಗ್ಗೆ ಚರ್ಚಿಸಿದ್ದಾರೆ. ಈ ಬಗ್ಗೆ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಭರವಸೆ ನೀಡಿದ್ದಾರೆ. ಸಮಯ ಸಂದರ್ಭ ಬಂದಾಗ ನಿಮ್ಮನ್ನು‌ ಸಂರ್ಪಕಿಸಲಾಗುವುದು ಎಂದ ಸಚಿವರು ಸರ್ಕಾರಿ ಶಾಲಾ ಬಗೆಗಿನ ಅಭಿಮಾನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Also Read  ➤ಶಿವಮೊಗ್ಗ ಚಿನ್ನಾಭರಣ ರಿಪೇರಿ ಮಾಡಿಸಲು ಬಂದ ವ್ಯಕ್ತಿಯ ಬ್ಯಾಗ್ ಕಳ್ಳತನ..!

error: Content is protected !!
Scroll to Top