ನೆಲ್ಯಾಡಿ: ಹೊಟೇಲ್ ನಲ್ಲಿ ಅಕ್ರಮವಾಗಿ ಜಿಲೆಟಿನ್ ಕಡ್ಡಿ ಮಾರಾಟ ಪ್ರಕರಣ ➤ ಜಿಲೆಟಿನ್ ಸರಬರಾಜು ಮಾಡುತ್ತಿದ್ದ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಮಾ.19. ಠಾಣಾ ವ್ಯಾಪ್ತಿಯ ಲಾವತ್ತಡ್ಕದ ಹೋಟೆಲ್‌ವೊಂದಕ್ಕೆ, ಜಿಲೆಟಿನ್ ಕಡ್ಡಿಯನ್ನು ಅಕ್ರಮವಾಗಿ ಸರಬರಾಜು ಮಾಡಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕಡಬ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸೋಮವಾರಪೇಟೆ ನಿವಾಸಿ ಚಂದ್ರ(60) ಹಾಗೂ ಸಕಲೇಶಪುರ ನಿವಾಸಿ
ನಿತ್ಯಾನಂದ (28) ಎಂದು ಗುರುತಿಸಲಾಗಿದೆ. ಲಾವತ್ತಡ್ಕದ ಹೊಟೇಲಿನಲ್ಲಿ ಜಿಲೆಟಿನ್ ಕಡ್ಡಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದ ಕಡಬ ಪೊಲೀಸರು ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡು ಹೊಟೇಲ್ ಮಾಲಕನನ್ನು ಬಂಧಿಸಿದ್ದರು. ಪ್ರಕರಣ ಸಂಬಂಧ ತನಿಖೆ‌ ನಡೆಸಿದ ಪೊಲೀಸರು ಆರೋಪಿಗೆ ಜಿಲೆಟಿನ್ ಕಡ್ಡಿಗಳನ್ನು ಸರಬರಾಜು ಮಾಡುತ್ತಿದ್ದ ಕಲ್ಲು ಕೋರೆಯ ಕಾರ್ಮಿಕ ಚಂದ್ರ ಹಾಗೂ ನಿತ್ಯಾನಂದನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Also Read  ಅಪ್ರಾಪ್ತ ಬಾಲಕಿಗೆ ಕಿರುಕುಳ - ಹೋಟೆಲ್ ಮಾಲಕ ಅರೆಸ್ಟ್

error: Content is protected !!
Scroll to Top