ನೆಲ್ಯಾಡಿ: ಟಿಪ್ಪರ್ ಮೇಲೆ ಉರುಳಿ ಬಿದ್ದ ಕಂಟೇನರ್ ➤ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರದಲ್ಲಿ ತಡೆ



(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ.19. ಕಂಟೇನರ್ ಲಾರಿಯೊಂದು ಪಲ್ಟಿಯಾಗಿ ಟಿಪ್ಪರ್ ಮೇಲೆ ಬಿದ್ದ ಪರಿಣಾಮ ಟಿಪ್ಪರ್ ಜಖಂಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಗೋಳಿತೊಟ್ಟು ಎಂಬಲ್ಲಿ ಗುರುವಾರದಂದು ಸಂಭವಿಸಿದೆ.





ಬೆಂಗಳೂರಿನಿಂದ ಮಂಗಳೂರು ಕಡರಗೆ ತೆರಳುತ್ತಿದ್ದ ಕಂಟೇನರ್ ಗೋಳಿತೊಟ್ಟು ಎಂಬಲ್ಲಿ ತಲುಪಿದಾಗ ಪಲ್ಟಿಯಾಗಿದ್ದು, ಪಕ್ಕದಿಂದ ತೆರಳುತ್ತಿದ್ದ ಟಿಪ್ಪರ್ ಮೇಲೆ ಬಿದ್ದಿದೆ. ಘಟನೆಯಲ್ಲಿ ರಸ್ತೆ ಸಂಚಾರದಲ್ಲಿ ತಡೆಯುಂಟಾಗಿದ್ದು, ಬಳಿಕ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.






error: Content is protected !!
Scroll to Top