ಶಂಕಿತ ಕೊರೋನ ಪುತ್ತೂರಿನ ವ್ಯಕ್ತಿ ವೆನ್ಲಾಕ್ ಆಸ್ಪತ್ರೆಗೆ

ಮಂಗಳೂರು, ಮಾ.18: ಪುತ್ತೂರಿನ ವ್ಯಕ್ತಿಯೋರ್ವನಲ್ಲಿ ಕೊರೋನ ವೈರಸ್ ಇರುವ ಶಂಕೆ ಉಂಟಾಗಿದ್ದು ವ್ಯಕ್ತಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಶಂಕಿತ ವ್ಯಕ್ತಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಮಂಗಳವಾರ ರಾತ್ರಿಯವರೆಗೆ 456 ಜನರ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗಿದ್ದು, 7 ಜನರ ಮೇಲೆ ನಿಗಾ ವಹಿಸಲಾಗಿದೆ. 241 ಜನರಿಗೆ ಮನೆಯಲ್ಲಿ ನಿಗಾ ಇರಿಸಲಾಗಿದೆ. ಒಟ್ಟು 14 ಜನರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 10 ಜನರ ವರದಿ ಬಂದಿದ್ದು, ಯಾರಲ್ಲೂ ಕೊರೋನ ದೃಢಪಟ್ಟಿಲ್ಲ.

Also Read  ಬೆಳ್ಳಾರೆ: ಬೃಹತ್ ವೈದ್ಯಕೀಯ ರಕ್ತದಾನ ಮತ್ತು ದಂತ ಚಿಕಿತ್ಸಾ ಶಿಬಿರ

error: Content is protected !!
Scroll to Top