ಕಡಬ: ರೈಲಿನಡಿಗೆ ಬಿದ್ದು ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಮಾ.16. ರೈಲಿನಡಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹವು ಮಂಗಳೂರು – ಸುಬ್ರಹ್ಮಣ್ಯ ರೋಡ್ ರೈಲ್ವೇ ಮಾರ್ಗದ ಕೋರಿಯಾರ್ ಗೇಟ್ ಬಳಿ ಸೋಮವಾರದಂದು ಕಂಡುಬಂದಿದೆ.

ಮೃತ‌ ವ್ಯಕ್ತಿಯನ್ನು 102ನೇ ನೆಕ್ಕಿಲಾಡಿ ಗ್ರಾಮದ ದಂಡುಗಿರಿ ನಿವಾಸಿ ಮೊಡೆಂಕಿಲ ಎಂಬವರ ಪುತ್ರ ಸುಂದರ(35) ಎಂದು ಗುರುತಿಸಲಾಗಿದೆ. ಸುಂದರ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಆಕಸ್ಮಿಕವಾಗಿ ರೈಲಿನಡಿಗೆ ಬಿದ್ದಿದ್ದಾರಾ ಎಂದು ತನಿಖೆಯ ನಂತರ ತಿಳಿದು ಬರಬೇಕಿದೆ. ಶನಿವಾರದಂದು ಸಮೀಪದಲ್ಲಿ ಆದಿ ಮೊಗೇರ್ಕಳ ದೈವದ ನೇಮೋತ್ಸವ ನಡೆದಿದ್ದು, ಭಾನುವಾರ ಸಂಜೆಯವರೆಗೂ ಅಲ್ಲಿದ್ದರು ಎನ್ನಲಾಗಿದೆ.

Also Read  ಸಬಳೂರು: ಶ್ರೀರಾಮ ಗೆಳೆಯರ ಬಳಗದಿಂದ ಶ್ರಮದಾನ ► ಶ್ರೀರಾಮ ಭಜನಾ ಮಂದಿರದ ವಠಾರ ಸ್ವಚ್ಚತೆ

error: Content is protected !!