ಕಲಬುರಗಿ: ಮೃತಪಟ್ಟ ವೃದ್ದನ ಕುಟುಂಬದವರಿಗೆ ಕೊರೋನ ಪಾಸಿಟಿವ್

ಕಲಬುರಗಿ, ಮಾ.16: ಕೊರೋನ ವೈರಸ್‌ನಿಂದ ಮೃತಪಟ್ಟಿದ್ದ ಕಲಬುರಗಿಯ ಮುಹಮ್ಮದ್ ಹುಸೈನ್ ಸಿದ್ದೀಕಿ (76) ಅವರ ಕುಟುಂಬದ ಮತ್ತೋರ್ವ ಸದಸ್ಯನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7ಕ್ಕೆ ಏರಿದೆ. ಈ ಪೈಕಿ ಕಲಬುರಗಿಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಉಳಿದವರಿಗೆ ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೋನ ಸೋಂಕಿನಿಂದ ಕಲಬುರಗಿಯಲ್ಲಿ ಮೃತಪಟ್ಟ ವೃದ್ಧನ ಕುಟುಂಬ ಸದಸ್ಯರಲ್ಲಿ ವೈರಸ್ ಇರುವುದು ಈಗಷ್ಟೇ ನಮಗೂ ತಿಳಿದು ಬಂದಿದೆ ಎಂದು ಆರೋಗ್ಯ ಕುಟುಂಬ ಇಲಾಖೆಯ ನಿರ್ದೇಶಕ ಡಾ. ಓಂ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, ಮೃತ ಕುಟುಂಬದ ನಾಲ್ವರನ್ನು ಪರೀಕ್ಷೆಗೊಳಪಡಿಸಿ ಕಲಬುರಗಿಯ ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಪರೀಕ್ಷೆ ಮಾಡಿದ ನಾಲ್ವರ ಪೈಕಿ ಮೂವರ ವರದಿ ನೆಗೆಟಿವ್ ಆಗಿ ಬಂದಿದ್ದು, ಸಂಬಂಧಿಕನೋರ್ವರ ವರದಿಯಲ್ಲಿ ಪಾಸಿಟಿವ್ ಬಂದಿದೆ ಎಂದರು.
ವೃದ್ಧನ ಆರೈಕೆಯನ್ನು ಹೆಚ್ಚಾಗಿ ಅವರು ಮಾಡುತ್ತಿದ್ದರು. ಆದ್ದರಿಂದ ಅವರಿಗೆ ಸೋಂಕು ತಗುಲಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.

Also Read   ಸರಣಿ ಅಪಘಾತ ➤ ಅದೃಷ್ಟವಶಾತ್  ತಪ್ಪಿದ ಪ್ರಾಣಾಪಾಯ

error: Content is protected !!
Scroll to Top