ತಮ್ಮ ಆದೇಶವನ್ನು ಉಲ್ಲಂಘಿಸಿದ ಬಿಎಸ್‌ವೈ: 4-5ಸಾವಿರ ಜನರ ಸೇರಿದ ಮದುವೆಯಲ್ಲಿ ಭಾಗವಹಿಸಿದ ಸಿಎಂ

ಬೆಳಗಾವಿ, ಮಾ.15: ಮಾರಣಾಂತಿಕ ಕೊರೋನ ವೈರಸ್ ಕುರಿತು ಸರಕಾರದ ನಿರ್ದೇಶನ ಉಲ್ಲಂಘಿಸಿ ಮೇಲ್ಮನೆಯ ಸರಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿ ವಿವಾಹ ನೆರವೇರಿದ್ದು, ಮದುವೆಯಲ್ಲಿ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಾಲ್ಗೊಂಡು ವದು ವರರನ್ನು ಆಶಿರ್ವದಿಸಿದ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ.

ಬೆಳಗಾವಿಯ ಶಗುನ ಗಾರ್ಡನ್‌ನಲ್ಲಿ ಕವಟಗಿಮಠ ಪುತ್ರಿಯ ವಿವಾಹ ನೆರವೇರಿತು. ಯಡಿಯೂರಪ್ಪ ಮದುವೆಯಲ್ಲಿ ಪಾಲ್ಗೊಂಡರು. ಮುಖ್ಯಮಂತ್ರಿ ಹಿಂದೆ ಅವರ ಭದ್ರತೆ, ಶಿಷ್ಟಾಚಾರ ಸಿಬ್ಬಂದಿ ಸಹ ಪಾಲ್ಗೊಂಡಿತ್ತು. ಮದುವೆಯಲ್ಲಿ ಜನ ಜಂಗುಳಿಯೇ ನೆರೆದಿತ್ತು. ಸುಮಾರು ನಾಲ್ಕರಿಂದ ಐದು ಸಾವಿರ ಮಂದಿ ಮದುವೆಯಲ್ಲಿ ಪಾಲ್ಗೊಂಡಿದ್ದರು.

Also Read  ವಿದ್ಯಾರ್ಥಿ ನಿಲಯಗಳ ದಾಖಲಾತಿ - ಅರ್ಜಿ ಆಹ್ವಾನ

ವಿವಾಹ ಮಹೋತ್ಸವದಲ್ಲಿ ಸರ್ಕಾರದ ನಿರ್ದೇಶನ ಮೀರಿ ವಿವಾಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಲು ಸ್ವತಃ ಯಡಿಯೂರಪ್ಪ ಗಲಿಬಿಲಿಗೊಂಡ ಪ್ರಸಂಗ ಸಹ ಸಂಭವಿಸಿತು.

error: Content is protected !!
Scroll to Top