ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ; ಓರ್ವ ಮೃತ್ಯು, ಇಬ್ಬರು ಗಂಭೀರ

ಕಾಸರಗೋಡು, ಮಾ.15: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆ ಬದಿಯ ಟ್ರಾನ್ಸ್ ಫಾರ್ಮರ್‌ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ ಓರ್ವ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಪೆರಿಯ ಮೂನಂಕಡವು ಎಂಬಲ್ಲಿ ನಡೆದಿದೆ.

ಮೃತಪಟ್ಟವರನ್ನು ತಮಿಳುನಾಡು ಪೊಳ್ಳಾಚ್ಚಿಯ ಮಣಿ (43) ಎಂದು ಗುರುತಿಸಲಾಗಿದೆ. ಚಾಲಕ ಶಕ್ತಿ ವೇಲು ಮತ್ತು ಕುಮಾರ್ ಎಂಬವರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಗುಚಿ ಬಿದ್ದ ಲಾರಿಯಡಿಯಲ್ಲಿ ಸಿಲುಕಿದ್ದ ಮೂವರನ್ನು ಗಂಟೆಗಳ ಶ್ರಮದ ಬಳಿಕ ಅಗ್ನಿಶಾಮಕ ಮತ್ತು ಪೊಲೀಸರು ಹೊರತೆಗೆದರೂ ಮಣಿ ಮೃತಪಟ್ಟಿದ್ದರು.

Also Read  ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕ್ ಯುವತಿ ಅರೆಸ್ಟ್

ಕುಂಡಂಗುಯಿ ಎಂಬಲ್ಲಿಗೆ ವಿದ್ಯುತ್ ಕಂಬವನ್ನು ಹೇರಿಕೊಂಡು ತೆರಳುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ನಡೆದಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ಲಾರಿಯಲ್ಲಿದ್ದ ವಿದ್ಯುತ್ ಕಂಬಗಳು ತೆರವುಗೊಳಿಸುತ್ತಿದ್ದಾಗ ಬಿದ್ದು ಅಗ್ನಿಶಾಮಕ ದಳದ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ.

error: Content is protected !!
Scroll to Top