ಉಡುಪಿ: ಮೂವರು ಶಂಕಿತರಲ್ಲೂ ಕೊರೋನ ಇಲ್ಲ

ಉಡುಪಿ, ಮಾ.14: ಶಂಕಿತ ಕೊರೋನ ವೈರಸ್ ಸೋಂಕಿಗಾಗಿ ಮಣಿಪಾಲದ ಕೆಎಂಸಿ ಹಾಗೂ ಉಡುಪಿಯ ಜಿಲ್ಲಾಸ್ಪತ್ರೆಗಳಿಗೆ ದಾಖಲಾದ ಮೂವರಲ್ಲೂ ಕೊರೋನಾ ವೈರಸ್ ಪತ್ತೆಯಾಗಿಲ್ಲ ಎಂದು ಉಡುಪಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಈ ಕುರಿತು ಶುಕ್ರವಾರ ಶಿವಮೊಗ್ಗದ ಪ್ರಯೋಗಾಲಯಗಳಿಗೆ ಕಳುಹಿಸಲಾದ ಮೂವರು ಶಂಕಿತರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಗಳು ಪರೀಕ್ಷೆಯ ವೇಳೆ ವೈರಸ್‌ಗೆ ನೆಗೆಟಿವ್ ಫಲಿತಾಂಶ ನೀಡಿವೆ ಎಂದು ಇಂದು ತನ್ನ ಕೈಸೇರಿದ ವರದಿಗಳು ತಿಳಿಸಿವೆ ಎಂದವರು ಹೇಳಿದರು.

Also Read  ಎಲ್ಲಾ ಸಾರ್ವಜನಿಕರಿಗೆ ಕೊರೋನಾ ಟೆಸ್ಟ್ ಕಡ್ಡಾಯ ಆದೇಶದಲ್ಲಿ ತಿದ್ದುಪಡಿ ➤ ನೂತನ ಆದೇಶದಲ್ಲಿ ಏನಿದೆ ಗೊತ್ತೇ.‌..⁉️

ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ದುಬೈ ಮೂಲದ ಕೆಎಂಸಿ ವೈದ್ಯಕೀಯ ವಿದ್ಯಾರ್ಥಿ, ಜಿಲ್ಲಾಸ್ಪತ್ರೆಗೆ ಶುಕ್ರವಾರ ದಾಖಲಾಗಿದ್ದ ಶಿರ್ವದ 37ರ ಹರೆಯದ ಯುವಕ ಹಾಗೂ ಸಾಗರ ತಾಲೂಕು ಆನಂದಪುರದ 68 ವರ್ಷ ಪ್ರಾಯದ ಮಹಿಳೆಯಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿಲ್ಲ ಎಂದರು.

ಮಹಿಳೆಯ ಮಾದರಿಯನ್ನು ನಿನ್ನೆ ಮೂರನೇ ಬಾರಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಮೂರು ಸಲವೂ ನೆಗೆಟಿವ್ ವರದಿ ಬಂದಿವೆ ಎಂದು ಡಾ. ಸೂಡ ಮಾಹಿತಿ ನೀಡಿದರು.

error: Content is protected !!
Scroll to Top