ಕೊರೋನ: ಕೇಂದ್ರದಿಂದ ಪ್ರತ್ಯೇಕ ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು, ಮಾ.14: ಮಾರಣಾಂತಿಕ ಕೊರೋನ ವೈರಸ್ ದೇಶದಲ್ಲಿ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಪ್ರತ್ಯೇಕ ಬಜೆಟ್ ಮಂಡನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ಧಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಪ್ರತ್ಯೇಕ ಬಜೆಟ್‌ಮಂಡಿಸಬೇಕು. ಎಲ್ಲಾ ರಾಜ್ಯಗಳಿಗೆ ಅದನ್ನು ಅನುಷ್ಠಾನ ಮಾಡಬೇಕು. ಅಮೆರಿಕ ಅಧ್ಯಕ್ಷ ಪ್ರತ್ಯೇಕ ಬಜೆಟ್ ಮಂಡಿಸಿದ್ದಾರೆ. ಇಲ್ಲೂ ಅದೇ ರೀತಿಯಾಗಿ ಮಂಡಿಸಬೇಕು. ಕೊರೊನಾ ವಿಚಾರದಲ್ಲಿ ಕೇಂದ್ರ ಸರಕಾರ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಕೊರೊನಾ ನಿಯಂತ್ರಣಕ್ಕೆ ಕ್ರಮ ತೆಗೆದುಕೊಂಡಿಲ್ಲ ಎಂದರು.

Also Read  ಸೂರಿಕುಮೇರು: ಟ್ಯಾಂಕರ್ ಪಲ್ಟಿ ➤ 10 ಗಂಟೆಗಳ ಬಳಿಕ ವಾಹನ ಸಂಚಾರ ಮುಕ್ತ

ಕೊರೋನ ವೈರಸ್ ರಾಜ್ಯದಲ್ಲಿ ಹೊರಗಿನಿಂದ ಬಂದವರಿಗೆ ಕಾಣಿಸಿಕೊಂಡಿದೆ. ಸ್ಥಳೀಯರಿಗೆ ಎಲ್ಲೂ ಬಂದಿಲ್ಲ. ಹೀಗಾಗಿ ಮಾಧ್ಯಮಗಳು ವಾಸ್ತವ ತೋರಿಸಬೇಕು. ಜನ ಈಗಾಗಲೇ ಭಯಗೊಂಡಿದ್ದಾರೆ. ಜನರನ್ನು ಭಯಬೀಳಿಸುವುದು ಬೇಡ ವಾಸ್ತವ ಜಾಗೃತಿ ಬಗ್ಗೆ ವರದಿ ಮಾಡಿ ಎಂದರು.

error: Content is protected !!
Scroll to Top