ಬೆಳ್ಳಾರೆ ದಾರುಲ್ ಹುದಾ ಸಂಸ್ಥೆಗೆ ನವ ಸಾರಥ್ಯ

  • ಅಧ್ಯಕ್ಷರಾಗಿ ಉಸ್ಮಾನ್ ಹಾಜಿ ಚೆನ್ನಾರು,

  • ಪ್ರ.ಕಾರ್ಯದರ್ಶಿಯಾಗಿ ಸೈಯದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್

ಸುಳ್ಯ, ಮಾ.14: ಬೆಳ್ಳಾರೆ ತಂಬಿನಮಕ್ಕಿಯ ಧಾರ್ಮಿಕ ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಗಳ ಸಮುಚ್ಚಯ ಕೇಂದ್ರ ದಾರುಲ್ ಹುದಾ ಎಜುಕೇಷನಲ್ ಸೆಂಟರ್ ಇದರ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಸಂಸ್ಥೆಯ ಶಿಲ್ಪಿಸೈಯದ್ ಹಸನುಲ್ ಅಹ್ದಲ್ ತಂಙಳ್‌ರ ಅಧ್ಯಕ್ಷತೆಯಲ್ಲಿ ದಾರುಲ್ ಹುದಾ ಸಂಸ್ಥೆಯಲ್ಲಿ ನಡೆಯಿತು. ಸೈಯದ್ ಮುನೀರುಲ್ ಅಹ್ದಲ್ ತಂಙಳ್ ಸಭೆಯನ್ನು ಉದ್ಘಾಟಿಸಿದರು. ಸೈಯದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್ ಮುಹಿಮ್ಮಾತ್ ಸಂಸ್ಥೆಯ ಮುನ್ನಡೆ ಮತ್ತು ನವ ಯೋಜನೆಗಳ ಬಗ್ಗೆ ವಿಷಯ ಮಂಡಿಸಿದರು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಮುಖ್ಯ ಪೋಷಕರಾಗಿ ಸೈಯದ್ ಹಸನುಲ್ ಅಹ್ದಲ್ ತಂಙಳ್, ಅಧ್ಯಕ್ಷರಾಗಿ ಉಸ್ಮಾನ್ ಹಾಜಿ ಚೆನ್ನಾರು, ಉಪಾಧ್ಯಕ್ಷರುಗಳಾಗಿ ಸೈಯದ್ ಮುನೀರುಲ್ ಅಹ್ದಲ್ ತಂಙಳ್ ಮುಹಿಮ್ಮಾತ್, ಇಸ್ಮಾಯೀಲ್ ಪಡ್ಪಿನಂಗಡಿ, ಹಮೀದ್ ಅಲ್ಫಾ ಬೆಳ್ಳಾರೆ ಕೆ.ಎಚ್.ಅಬ್ದುಲ್ಲಾ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿಯಾಗಿ ಸೈಯದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್ ಮುಹಿಮ್ಮಾತ್, ಕಾರ್ಯದರ್ಶಿಗಳಾಗಿ ಹಾಫಿಳ್ ಅಬ್ದುಸ್ಸಲಾಂ ನಿಝಾಮಿ ಚೆನ್ನಾರು, ಶಂಸುದ್ದೀನ್ ಝಂಝಂ, ಹನೀಫ್ ಹಾಜಿ ಇಂದ್ರಾಜೆ, ಜಅ್ಫರ್ ಮಾಸ್ಟರ್ ಪೆರುವಾಜೆ, ಕೋಶಾಧಿಕಾರಿಯಾಗಿ ಅಯ್ಯೂಬ್ ತಂಬಿನಮಕ್ಕಿ, ಸದಸ್ಯರಾಗಿ ಅಬೂಬಕರ್ ಸಅದಿ, ಹಸನ್ ಹಾಜಿ ಸುಳ್ಯ, ರಿಝ್ವಿನ್ ಹಾಜಿ ಸುಳ್ಯ, ಮುಹಮ್ಮದ್ ಹಾಜಿ ಬಿಸ್ಮಿಲ್ಲಾ, ಮಹ್‌ಮೂದ್ ಬೆಳ್ಳಾರೆ, ಎಂ.ಆರ್. ರಹೀಂ ಬೆಳ್ಳಾರೆ, ಮೂಸಾ ಕನಕಮಜಲು ಕೆ.ಎಂ.ಮುಹಮ್ಮದ್ ಕಳಂಜ ಸಲಾಹುದ್ದೀನ್ ಮಾಸ್ತಿಕಟ್ಟೆ ಮುಹಮ್ಮದ್ ನೇಲ್ಯಮಜಲು ಆಯ್ಕೆಯಾಗಿದ್ದಾರೆ.
ಹಾಫಿಳ್ ಅಬ್ದುಸ್ಸಲಾಂ ನಿಝಾಮಿ ಚೆನ್ನಾರು ಸ್ವಾಗತಿಸಿ, ವಂದಿಸಿದರು.

Also Read  ಸವಣೂರು; 36ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ 

error: Content is protected !!
Scroll to Top