ಉಪ್ಪಿನಂಗಡಿ: ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಕಳ್ಳ ➤ 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.13. ಉಪ್ಪಿನಂಗಡಿ ಹಾಗೂ ಪುತ್ತೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 13 ಕ್ಕೂ ಹೆಚ್ಚಿನ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರ ನೇತೃತ್ವದ ಅಪರಾಧ ಪತ್ತೆ ದಳವು ಓರ್ವ ಆರೋಪಿಯನ್ನು ಬಂಧಿಸಿ, 18 ಲಕ್ಷ ರೂ‌. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಮೂಲತಃ ಚಿಕ್ಕಮಗಳೂರು ಜಿಲ್ಲೆಯವನಾದ ಪ್ರಸ್ತುತ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಅಳಿರಾ ನಿವಾಸಿ ಶೌಕತ್ ಅಲಿ ಯಾನರ ಶೌಕತ್(56) ಎಂದು ಗುರುತಿಸಲಾಗಿದೆ. ಆರೋಪಿಯು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಆದರ್ಶನಗರ, ನೆಕ್ಕಿಲಾಡಿ, ಕಲ್ಲೇರಿ, ಕೆಂಪಿ ಮಜಲು ಹಾಗೂ ಪುತ್ತೂರು ನಗರ ಠಾಣಾ ಸರಹದ್ದಿನ ಅಜೇಯ ನಗರ, ಮುರ, ಬನ್ನೂರು, ಹಾರಾಡಿ, ಕೋಡಿಂಬಾಡಿ, ಅರ್.ಟಿ ಓ ಬಳಿಯ ಜೈನರಗುರಿ, ಸಾಲ್ಮರ, ದಾರಂದಕುಕ್ಕು, ಬಂಟ್ವಾಳ ನಗರ ಠಾಣಾ ಸರಹದ್ದಿನ ಕಲ್ಲಡ್ಕ ಮೊದಲಾದ ಸ್ಥಳಗಳಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ವಿಚಾರ ತನಿಖೆಯ ವೇಳೆ ಹೊರಬಂದಿದೆ. ಈತನಿಂದ 13 ಪ್ರಕರಣಗಳನ್ನು ಪತ್ತೆ ಹಚ್ಚಿ ಸುಮಾರು 18 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಸ್ವಾಧೀನಪಡಿಸಲಾಗಿದೆ.

Also Read  ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಿಎಂ ಯಡಿಯೂರಪ್ಪರಿಂದ ಗುಡ್ ನ್ಯೂಸ್ ➤ ಅದೇನೆಂದರೆ...!!

ಸದ್ರಿ ಪ್ರಕರಣದ ಪತ್ತೆಯ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಠಾಣಾ ಪಿ.ಎಸ್. ಐ ಈರಯ್ಯ ಡಿ.ಎನ್ (ಕಾ&ಸು), ಪಿ.ಎಸ್.ಐ ಭರತ್ (ಅಪರಾಧ), ಎ.ಎಸ್.ಐ ಚೋಮ, ಹೆಚ್ ಸಿ ಗಳಾದ ದೇವದಾಸ್, ಶೇಖರ್, ಪಿಸಿ ಇರ್ಷಾದ್ ಪಿ. ಪಡಂಗಡಿ ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಹೆಚ್.ಸಿ, ಅದ್ರಾಮ ಪುಣಚ, ದರ್ಣಪ್ಪ, ಪಿಸಿ ವಿನಯಕುಮಾರ್ ಯೇನೆಕಲ್ ಮತ್ತು ಪುತ್ತೂರು ಗ್ರಾಮಾಂತರ ವೃತ್ತ ಕಛೇರಿಯ ಹೆಚ್.ಸಿ ಅಬ್ದುಲ್ ಸಲೀಂ, ಶಿವರಾಮ, ಪಿಸಿ ಜಗದೀಶ್, ಇಲಾಖಾ ವಾಹನ ಚಾಲಕರಾದ ಬಂದೆನವಾಜ್ ಬುಡ್ಕಿರವರು ಭಾಗಿಯಾಗಿರುತ್ತಾರೆ.

Also Read  ಕಡಬ: ಪ್ರಾಥಮಿಕ ಶಾಲಾ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಅನ್ಯಾಯದ ಆರೋಪ- ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ SDMC ಸಮಿತಿ

error: Content is protected !!
Scroll to Top