ಒಂದು ವಾರಗಳ ಕಾಲ ಮಾಲ್, ಶಾಲಾ ಕಾಲೇಜುಗಳನ್ನು ಬಂದ್ ಮಾಡುವಂತೆ ಸಿಎಂ ಆದೇಶ ➤ ಮದುವೆಗೂ ಇಲ್ಲ ಪರ್ಮಿಶನ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.13. ಕೊರೊನಾ ವೈರಸ್ ಕರ್ನಾಟಕಕ್ಕೆ ಕಾಲಿಟ್ಟು ಒಂದು ಬಲಿ ತೆಗೆದುಕೊಂಡ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮಹತ್ತರ ನಿರ್ಧಾರವನ್ನು ತೆಗೆದುಕೊಂಡಿದ್ದು, ನಾಳೆಯಿಂದ ಥಿಯೇಟರ್, ಶಾಪಿಂಗ್ ಮಾಲ್, ಸಭೆ-ಸಮಾರಂಭಗಳನ್ನು ಒಂದು ವಾರಗಳ ಮಟ್ಟಿಗೆ ರದ್ದುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ ಪಬ್, ಕ್ಲಬ್ ಮೇಳ, ಕ್ರೀಡಾ ಸಮಾರಂಭವನ್ನೂ ಮಾಡದಂತೆ ಆದೇಶ ಹೊರಡಿಸಿದ್ದಾರೆ. ಈಗಾಗ್ಲೇ ಕರ್ನಾಟಕದಲ್ಲಿ ಕೊರೊನಾಗೆ ಒಂದು ಬಲಿಯಾಗಿದ್ದು, ಇದಕ್ಕೆ ಮುಖ್ಯಮಂತ್ರಿ ವಿಷಾಧ ವ್ಯಕ್ತಪಡಿಸಿದ್ದಾರೆ. ಇನ್ನು ಮದುವೆ ನಿಗದಿಯಾಗಿದ್ದರೂ ಅದನ್ನು ಮುಂದೂಡುವಂತೆ ತಿಳಿಸಿದ್ದಾರೆ. ರಾಜ್ಯದಲ್ಲಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಕಾಲೇಜ್ ಗಳನ್ನೂ ಒಂದು ವಾರದ ಮಟ್ಟಿಗೆ ರಜೆ ನೀಡಬೇಕೆಂದು ಆದೇಶ ಹೊರಡಿಸಿಲಾಗಿದೆ. ಒಂದು ವೇಳೆ ಪರೀಕ್ಷೆಗಳು ಇದ್ದಲ್ಲಿ ಅದನ್ನ ಮುಂದುವರಿಸಬಹುದು. ಕೇವಲ ಪರೀಕ್ಷೆ ಇದ್ದವತ್ತು ಮಾತ್ರ ಕಾಲೇಜ್ ಗೆ ಹೋಗಬೇಕು ಎಂದು ತಿಳಿಸಲಾಗಿದೆ.

Also Read  ಖ್ಯಾತ ಹಾಸ್ಯ ಸಾಹಿತಿ ಶ್ರೀಮತಿ ಭುವನೇಶ್ವರಿ ಹೆಗಡೆ ನಿವಾಸಕ್ಕೆ ಕಸಾಪ ರಾಜ್ಯಾಧ್ಯಕ್ಷ ಭೇಟಿ

error: Content is protected !!
Scroll to Top