ಎನ್‌ಪಿಆರ್‌ಗೆ ದಾಖಲೆ ಸಲ್ಲಿಸುವ ಅಗತ್ಯವಿಲ್ಲ ರಾಜ್ಯಸಭೆಯಲ್ಲಿ ಅಮಿತ್ ಶಾ

ಹೊಸದಿಲ್ಲಿ, ಮಾ.13: ಎನ್‌ಪಿ‌ಆರ್‌ಗೆ ಯಾವುದೇ ದಾಖಲೆ ಸಲ್ಲಿಸುವ ಅಗತ್ಯವಿಲ್ಲ. ಇದರಿಂದ ಯಾರನ್ನೂ ಅನುಮಾನಾಸ್ಪದವಾಗಿ ಕಾಣುವುದಿಲ್ಲ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಬಗ್ಗೆ ಯಾರೂ ಚಿಂತಿಸಬೇಕಾದ ಅಗತ್ಯವಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.

“ಎನ್‌ಪಿಆರ್ ಬಗ್ಗೆ ಭಯಪಡುವ ಅಗತ್ಯವಿಲ್ಲ, ಯಾರನ್ನೂ ಅನುಮಾನಾಸ್ಪದವಾಗಿ ಕಾಣುವುದಿಲ್ಲ. ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ನವೀಕರಿಸಲು ಯಾವುದೇ ದಾಖಲೆಯನ್ನು ಪಡೆಯಲಾಗುವುದಿಲ್ಲ. ಅಲ್ಲದೆ ಕೆಲ ಮಾಹಿತಿ ಒದಗಿಸುವುದು ಐಚ್ಚಿಕ ವಿಷಯವಾಗಿರಲಿದೆ”ಶಾ ಹೇಳಿದರು.

ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಗಲಭೆಗಳಿಗೆ ಕಾರಣರಾದವರನ್ನು ಅವರ ಜಾತಿ, ಧರ್ಮ ಮತ್ತು ರಾಜಕೀಯ ಸಂಬಂಧಗಳನ್ನು ಲೆಕ್ಕಿಸದೆ ಬಂಧಿಸಲಾಗುತ್ತದೆ.ಇದಾಗಲೇ ಗಲಭೆ ಸಂಬಂಧ ರು, 700 ಕ್ಕೂ ಹೆಚ್ಚು ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ 2,600 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

Also Read  ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಬೆಳಗಾವಿ ಕ್ಷೇತ್ರದ ಮತ ಎಣಿಕೆ ➤ ಜಿದ್ದಾ ಜಿದ್ದಿನ ಕಣದಲ್ಲಿ ಮಂಗಳಾ ಅಂಗಡಿ vs ಸತೀಶ್ ಜಾರಕಿಹೊಳಿ

ಹಿಂಸಾಚಾರಕ್ಕೆ ಕಾರಣರಾದವರಿಗೆ ಮತ್ತು ಗಲಭೆಯನ್ನು ಪ್ರಚೋದಿಸಲು ಸಂಚು ರೂಪಿಸಿದವರಿಗೆ ಅವರ ಜಾತಿ, ಧಾರ್ಮಿಕ ಮತ್ತು ರಾಜಕೀಯ ಸಂಬಂಧಗಳದ ಹೊರತಾಗಿ ಕೂಡ ಶಿಕ್ಷೆಯಾಗುತ್ತದೆ ಎಂದು ಅವರು ಹೇಳಿದರು. ಈ ವಿಷಯದ ಬಗ್ಗೆ ಚರ್ಚೆಯಿಂದ ಸರ್ಕಾರ ಹಿಂದೆ ಸರಿಯುವುದಿಲ್ಲಆದರೆ ಶಾಂತಿಯುತ ಹೋಳಿ ಆಚರಣೆಯನ್ನು ನಾವು ಬಯಸುತ್ತೇವೆ.

ಗಲಭೆಯ ವೀಡಿಯೊಗಳ ವಿವರವಾದ ಪರಿಶೀಲನೆ ನಡೆಸಲಾಗುತ್ತಿದೆ ಮತ್ತು ಚಾಲನಾ ಪರವಾನಗಿ, ಮತದಾರರ ಗುರುತಿನ ಡೇಟಾ ಬಳಸಿ ಮುಖ ಗುರುತಿಸುವಿಕೆ ಸಾಫ್ಟ್‌ವೇರ್‌ಮೂಲಕ ಆರೋಪಿಗಳ ಪತ್ತೆ ನಡೆಯುತ್ತದೆ. ಗೌಪ್ಯತೆ ಕುರಿತು ಯಾವುದೇ ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ನು ಉಲ್ಲಂಘಿಸಿಲ್ಲ ಮತ್ತು ಯಾವುದೇ ಆಧಾರ್ ಡೇಟಾವನ್ನು ಬಳಸಲಾಗಿಲ್ಲ ಎಂದು ಅವರು ಹೇಳಿದರು.ಇದೇ ವೇಳೆ ಮುಖ ಗುರುತಿಸುವಿಕೆ ಸಾಫ್ಟ್‌ವೇರ್ ಬಳಸಿ 1922 ಮುಖಗಳನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು.

50 ಗಂಭೀರ ಕೊಲೆ ಪ್ರಕರಣಗಳು, ಧಾರ್ಮಿಕ ಸ್ಥಳಗಳು, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ಹಲ್ಲೆ ಮೂರು ಎಸ್‌ಐಟಿಗಳಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

Also Read  ಮಂಗಳಮುಖಿಗೆ  ಅವಾಚ್ಯ ಶಬ್ಧಗಳಿಂದು ಬೈದು ಹಲ್ಲೆ ಮಾಡಿದ ನಾಲ್ವರು ಅಪರಿಚಿತ ಯುವಕರು..!​ ➤ ದೂರು ದಾಖಲು

 

error: Content is protected !!
Scroll to Top