(ನ್ಯೂಸ್ ಕಡಬ), newskadaba.com ಕಡಬ, ಆ.28. ‘ಮುಳುಗು ಸೇತುವೆ’ಯೆಂದೇ ಖ್ಯಾತಿ ಪಡೆದಿರುವ ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿರುವ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಹೊಸ್ಮಠ ಸೇತುವೆಯು ಜಲಾವೃತಗೊಂಡು ಮುಳುಗಡೆಗೊಂಡಿದೆ.
ಕಳೆದ ಕೆವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರಸಕ್ತ ವರ್ಷದಲ್ಲಿ ಎರಡನೇ ಸಲ ಮುಳಗಡೆಗೊಂಡಿದ್ದು, ಸಾರ್ವಜನಿಕರು ಸಂಕಷ್ಟ ಎದುರಿಸಬೇಕಾಯಿತು. ಸಂಜೆ ಸಮಯವಾದುದರಿಂದ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ವಿವಿಧ ಸಂಸ್ಥೆಗಳ ನೌಕರರು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಅಪಾರ ಜನರು ನೆಲ್ಯಾಡಿ, ಇಚಿಲಂಪಾಡಿ ಮೂಲಕ ಸುತ್ತುಬಳಸಿ ಪ್ರಯಾಣಿಸಬೇಕಾಯಿತು.
Also Read ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ► ಧರ್ಮಸ್ಥಳದಲ್ಲಿ ನಡೆದ ಹೃದಯ ವಿದ್ರಾವಕ ಘಟನೆ