ಮಧ್ಯೆಪ್ರದೇಶ ರಾಜಕೀಯ ಬಿಕ್ಕಟ್ಟು: 12 ಶಾಸಕರಿಗೆ ನೋಟಿಸ್ ನೀಡಿದ ಸ್ಪೀಕರ್

ಭೂಪಾಲ್, ಮಾ.13: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಧ್ಯಪ್ರದೇಶದ 12 ಕಾಂಗ್ರೆಸ್ ಬಂಡಾಯ ಶಾಸಕರುಗಳಿಗೆ ವಿಧಾನಸಭೆ ಸ್ಪೀಕರ್ ಎನ್.ಪಿ. ಪ್ರಜಾಪತಿ ನೋಟಿಸ್ ನೀಡಿದ್ದು, ನಾಳೆಯೊಳಗೆ ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ.

ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆಯೇ ಅಥವಾ ಬಲವಂತದಿಂದ ರಾಜೀನಾಮೆ ನೀಡಿದ್ದಾರೆಯೇ ಎಂಬುದರ ಬಗ್ಗೆ ಸ್ಪಷ್ಟನೆ ನೀಡುವಂತೆ ಸ್ಪೀಕರ್ ಸೂಚಿಸಿರುವುದಾಗಿ ವಿಧಾನಸಭೆಯ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.

ಈ ಮಧ್ಯೆ ಮಾರ್ಚ್16 ರಂದು ಬಿಜೆಪಿ ವಿಶ್ವಾಸ ಮತ ಯಾಚನೆಗೆ ಕೋರಿದ್ದು, 22 ಶಾಸಕರ ನಿರ್ಧಾರದ ಆಧಾರದ ಮೇಲೆ ವಿಶ್ವಾಸ ಮತ ಯಾಚಿಸಲು ಸಿದ್ಧವಿರುವುದಾಗಿ ಕಾಂಗ್ರೆಸ್ ಹೇಳಿದೆ. ರಾಜೀನಾಮೆ ನೀಡಿರುವ ಆರು ಸಚಿವರು ಸೇರಿದಂತೆ 22 ಶಾಸಕರುಗಳಿಗೆ ಸ್ಪೀಕರ್ ಪ್ರಜಾಪತಿ ನೋಟಿಸ್ ನೀಡಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದು, ಸ್ಪೀಕರ್ ಅವರನ್ನು ಭೇಟಿ ಮಾಡಿ ಏಕೆ ರಾಜೀನಾಮೆ ಸಲ್ಲಿಸಲಿಲ್ಲ ಎಂಬುದು ಗೊತ್ತಾಗಬೇಕಾಗಿದೆ ಎಂದಿದ್ದಾರೆ.

Also Read  ಮುಂಬೈಯಲ್ಲಿ ರಸ್ತೆ ಅಪಘಾತ - ಕಾಸರಗೋಡು ಕಯ್ಯಾರ್ ನಿವಾಸಿ ಮೃತ್ಯು

error: Content is protected !!
Scroll to Top