ಪೆರುವಾಯಿ ಮಖಾಂ ಉರೂಸ್ ➤ ಮಾ.11 ರಿಂದ 15 ರ ವರೆಗೆ

(ನ್ಯೂಸ್ ಕಡಬ) newskadaba.com ವಿಟ್ಲ, ಮಾ.10. ಚರಿತ್ರೆ ಪ್ರಸಿದ್ದವಾದ ಬದ್ರಿಯಾ ಜುಮಾ ಮಸ್ಜಿದ್ ಪೆರುವಾಯಿ ವಠಾರದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಅಸ್ಸಯ್ಯಿದ್ ಅಬೂಬಕ್ಕರ್ ಹೈದ್ರೋಸ್ ಅಲ್ ಹಾದಿ ತಂಙಳ್(ಖ.ಸಿ)ರವರ ಮಖಾಂ ದರ್ಬಾರಿನ ಉರೂಸ್ ಮಹಾ ಸಂಭ್ರಮವು ಮಾರ್ಚ್ 11 ರಿಂದ 15 ರವರೆಗೆ ನಡೆಯಲಿದೆ.

ಬದುಕಿನ ಭವ್ಯತೆಗೆ ತಿಲಾಂಜಲಿ ನೀಡಿ ಪಾರತ್ರಿಕ ಮೋಕ್ಷವನ್ನು ಗುರಿಯಾಗಿಸಿ ಭೌತಿಕ ಜಂಜಾಟದಿಂದ ಮುಕ್ತಿ ಪಡೆದು ತನು – ಮನ – ಧನವನ್ನು ಇಲಾಹೀ ಮಾರ್ಗದಲ್ಲಿ ವ್ಯಯಿಸುತ್ತಾ ತ್ಯಾಗದ ದೃಷ್ಟಿಯಿಂದ ತನುವನ್ನು ಕರಗಿಸಿ, ಆಧ್ಯಾತ್ಮಿಕ ಧ್ಯಾನದಲ್ಲಿ ಆತ್ಮವನ್ನು ವಿನಿಯೋಗಿಸಿ ಸರಳ ಸಜ್ಜನಿಕೆಯ ಜೀವನ ನಡೆಸಿ, ಸಮುದಾಯದ ಹೃದಯದಲ್ಲಿ ಅಚಲವಾಗಿ ಬೇರೂರಿ, ಮಾದರಿ ಜೀವನವನ್ನು ತೋರಿಸಿ, ಸಂದರ್ಭನುಸಾರವಾಗಿ ಉಪದೇಶ ನೀಡಿ, ಸಂತರ ಸ್ಥಾನಕ್ಕೇರಿ, ಅದ್ಬುತ ಪವಾಡ ಸಿದ್ಧಿಯನ್ನು ಹೊಂದಿ, ಅಂತ್ಯ ವಿಶ್ರಮ ಹೊಂದುತ್ತಿರುವ ಅಹ್ಲ್ ಬೈತಿನ ಮಹೋನ್ನತ ತಾರೆ ಅಸಯ್ಯಿದ್ ಅಬೂಬಕರ್ ಅಲ್ ಹೈದ್ರೋಸ್ ಅಲ್ ಹಾದಿ ತಂಙಲ್ ಪೆರುವಾಯಿ(ಖ.ಸಿ) ರವರ ಹೆಸರಿನಲ್ಲಿ ಎರಡು ವರುಷಕ್ಕೊಮ್ಮೆ ನಡೆಸಿಕೊಂಡು ಬರುವ ಉರೂಸ್ ಸಮಾರಂಭವು ವಿವಿಧ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕಾಗಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಲಿಂಗಾಯತ ಪಂಚಮಸಾಲಿ ಲಾಠಿಚಾರ್ಜ್ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ

 

error: Content is protected !!
Scroll to Top