ಕಡಬ: ವಿವಾಹಿತ ಮಹಿಳೆ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಮಾ.09. ವಿವಾಹಿತ ಮಹಿಳೆಯೋರ್ವರು ತನ್ನ ಮಗುವನ್ನು ಮನೆಯಲ್ಲೇ ಬಿಟ್ಟು ಫೆಬ್ರವರಿ 26ರಂದು ನಾಪತ್ತೆಯಾಗಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದ ಎನ್ ಕೂಪ್ ಸಿ.ಆರ್.ಸಿ ಕಾಲನಿ ಎಂಬಲ್ಲಿ ನಡೆದಿದೆ.

ನಾಪತ್ತೆಯಾಗಿರುವ ಮಹಿಳೆಯನ್ನು ಎನ್ ಕೂಪ್ ಸಿ.ಆರ್.ಸಿ ಕಾಲನಿ ನಿವಾಸಿ ಕನಕರಾಜ ಎಂಬವರ ಪತ್ರಿ ಸುಮಿತ್ರಾ(30) ಎಂದು ಗುರುತಿಸಲಾಗಿದೆ. ಎಂಟು ವರ್ಷಗಳ ಹಿಂದೆ ಸುಮಿತ್ರಾಳನ್ನು ತಮಿಳುನಾಡಿಗೆ ವಿವಾಹ ಮಾಡಿಕೊಡಲಾಗಿದ್ದು, ಕೆಲವು ಸಮಯಗಳ ಕಾಲ ಗಂಡನ ಜೊತೆಗಿದ್ದು ಆ ಬಳಿಕ ತನ್ನ ತವರು ಮನೆಗೆ ಬಂದಿದ್ದಾರೆ ಎನ್ನಲಾಗಿದೆ. ಫೆಬ್ರವರಿ 26 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಮಗುವನ್ನು ಮನೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದು, ಈ ಬಗ್ಗೆ ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿದ ಪೋಷಕರು, ಮಹಿಳೆ ಪತ್ತೆಯಾಗದ ಹಿನ್ನೆಲೆಯಲ್ಲಿ ಕಡಬ ಠಾಣೆಗೆ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಾಗಿದೆ.

Also Read  ಆತ್ಮಹತ್ಯೆಗೆ ಶರಣಾಗಿದ್ದ ವಿದ್ಯಾರ್ಥಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ..!

error: Content is protected !!