ಮಂಗಳೂರು ಗೋಲಿಬಾರ್ ಪ್ರಕರಣ: ಹಿಂಸಾಚಾರದಲ್ಲಿ 78 ಪೊಲೀಸರಿಗೆ ಗಾಯ; ಡಿಸಿಪಿ ಅರುಣಾಂಶುಗಿರಿ

ಮಂಗಳೂರು, ಮಾ.9: ಡಿ.19ರಂದು ಮಂಗಳೂರಿನಲ್ಲಿ ನಡೆದ ಗಲಭೆ ಹಾಗೂ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಹಾಜರಾದ ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಶುಗಿರಿ ಘಟನೆಯಲ್ಲಿ 78 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಾಯಗಳಾಗಿವೆ ಎಂದು ಹೇಳಿಕೆ ನೀಡಿದ್ದಾರೆ.

ವಿಚಾರಣೆಯು ಹಂಪನಕಟ್ಟೆಯ್ಲಲಿರುವ ಮಿನಿ ವಿಧಾನಸೌಧದ ಉಪ ವಿಭಾಗಾಧಿಕಾರಿ ನ್ಯಾಯಾಲಯದ ಸಭಾಂಗಣದಲ್ಲಿ ನಡೆಯಿತು. ಐಪಿಎಸ್ ಅಧಿಕಾರಿ ಅರುಣಾಂಶುಗಿರಿ ವಿಚಾರಣಾಧಿಕಾರಿ ಎದುರು ಹಾಜರಾಗಿದ್ದು, ಲಿಖಿತ ಹೇಳಿಕೆ ಹಾಗೂ ದಾಖಲೆಗಳನ್ನು ಸಲ್ಲಿಸಿದರು.

ನಾನು ಡಿ.19ರಂದು ಪೊಲೀಸ್ ಸಿಬ್ಬಂದಿಯೊಂದಿಗೆ ಕರ್ತವ್ಯದಲ್ಲಿದ್ದೆ. ಅನುಮತಿ ಇಲ್ಲದೆ ಪ್ರತಿಭಟನೆಗೆ ಪಯತ್ನಿಸಿದ ಜನರನ್ನು ನಿಂಯಂತ್ರಿಸುತ್ತಿದ್ದೆವು. ಪ್ರತಿಭಟನೆಗೆ ಸೇರಿದ ಜನರು ಗಲಭೆಗೆ ಇಳಿದರು. ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದರು. ಇದರಿಂದಾಗಿ 78 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಾಯಗೊಂಡರು. ಪ್ರತಿಭಟನೆ ನಿಯಂತ್ರಿಸಲು ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು ಎಂದು ಹೇಳಿದ್ದಾರೆ.

Also Read  ಪಿಲಿಕುಳ ಜೈವಿಕ ಉದ್ಯಾನವನದ "ವಿಕ್ರಂ ಹುಲಿ" ಇನ್ನಿಲ್ಲ

error: Content is protected !!
Scroll to Top