‘ಶಾದಿ ಭಾಗ್ಯ’ ಯೋಜನೆಗೆ ಬಿಜೆಪಿ ಸರಕಾರ ತಡೆ

  • ಹೊಸ ಅರ್ಜಿ ಸ್ವೀಕರಿಸದಂತೆ ಆದೇಶ

ಬೆಂಗಳೂರು, ಮಾ.8: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೆ ತಂದಿದ್ದ ‘ಶಾದಿ ಭಾಗ್ಯ’ ಯೋಜನೆ ನಿಲ್ಲಿಸಲು ರಾಜ್ಯದ ಯಡಿಯೂರಪ್ಪಸರಕಾರ ತೀರ್ಮಾನಿಸಿದೆ.
ಅಲ್ಪಸಂಖ್ಯಾತರ ವಿವಾಹಕ್ಕಾಗಿ ಜಾರಿಗೆ ತರಲಾಗಿದ್ದ ‘ಶಾದಿ ಭಾಗ್ಯ’ ಯೋಜನೆಗಾಗಿ ಹೊಸ ಅರ್ಜಿ ಸ್ವೀಕರಿಸಬೇಡಿ ಎಂದು ಸರಕಾರ ಆದೇಶ ಹೊರಡಿಸಿದೆ.

ಈ ಸಾಲಿನ ಬಜೆಟ್‌ನಲ್ಲಿ ‘ಶಾದಿ ಬಾಗ್ಯ’ಕ್ಕೆ ಹಣ ಮೀಸಲಿಟ್ಟಿರಲಿಲ್ಲ. ಇದೀಗ ಅಲ್ಪಸಂಖ್ಯಾತ ನಿರ್ದೇಶನಾಲಯದಿಂದ ಹೊಸ ಅರ್ಜಿ ಸ್ವೀಕರಿಸದಂತೆ ಆದೇಶ ಹೊರಬಿದ್ದಿದೆ.
ಬಿದಾಯಿ ಯೋಜನೆಯಡಿ ಮದುವೆ ಖರ್ಚು, ಜೀವನಾವಶ್ಯಕ ಸಾಮಗ್ರಿ ಖರೀದಿಗೆ 50 ಸಾವಿರ ರೂ.ನೀಡುವ ಶಾದಿ ಬಾಗ್ಯ ಯೋಜನೆಯನ್ನು ಸಿದ್ದರಾಮಯ್ಯ ಸರಕಾರ ಜಾರಿಗೊಳಿಸಿತ್ತು.

error: Content is protected !!
Scroll to Top