ಮಹಿಳಾ ಟಿ-20ವಿಶ್ವಕಪ್ ಮುಡಿಗೇರಿಸಿದ ಆಸ್ಟ್ರೇಲಿಯಾ

  • ಭಾರತಕ್ಕೆ ನಿರಾಶೆ

ಮೆಲ್ಬೋರ್ನ್, ಮಾ.8: ಮಹಿಳಾ ಟಿ-20 ವಿಶ್ವಕಪ್ ಫೈನಲ್ ಪಂದ್ಯಾಟದಲ್ಲಿ ಭಾರತವನ್ನು ಭರ್ಜರಿಯಾಗಿ ಸೋಲಿಸಿ ಆಸ್ಟ್ರೇಲಿಯಾ 5ನೇ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ನಿಗದಿತ 20ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 184ರನ್ ದಾಖಲಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಭಾರತ 19.1 ಓವರ್‌ಗಳಲ್ಲಿ 99ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೊಲೊಪ್ಪಿಕೊಂಡಿದೆ.

ಆಸ್ಟ್ರೇಲಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಮತ್ತೊಮ್ಮೆ ವಿಶ್ವಕಪ್‌ಗೆ ಮುತ್ತಿಟ್ಟು ಸಂಭ್ರಮಿಸಿದೆ.

Also Read  ಹಿರಿಯ ನಾಗರೀಕರ ಕ್ರೀಡಾಕೂಟ

error: Content is protected !!
Scroll to Top