ಕಾರ್ಕಳದ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಇಲ್ಲ: ಆಸ್ಪತ್ರೆಗೆ ತಲುಪಿದ ನೆಗೆಟಿವ್ ರಿಪೋರ್ಟ್

ಕಾರ್ಕಳ, ಮಾ.7: ಶಂಕಿತ ಕೊರೋನ ವೈರಸ್ ಹಿನ್ನಲೆಯಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿರುವ ಕಾರ್ಕಳ ಮುನಿಯಾಲು ವ್ಯಕ್ತಿಯ ವೈದ್ಯಕೀಯ ಪರೀಕ್ಷಾ ವರದಿ ಆಸ್ಪತ್ರೆ ತಲುಪಿದ್ದು, ವರದಿಯಲ್ಲಿ ನೆಗೆಟಿವ್ ರಿಪೋರ್ಟ್ ಬಂದಿರುವುದು ಆತಂಕ ದೂರವಾಗಿದೆ.

ಇಸ್ರೇಲ್ ಪ್ರವಾಸ ಮುಗಿಸಿ ತಮ್ಮೂರಿಗೆ ವಾಪಾಸ್ ಆಗಿದ್ದ 75 ವರ್ಷದ ವ್ಯಕ್ತಿ ಕೆಮ್ಮು ಹಾಗೂ ಶೀತದ ತೊಂದರೆಯಿಂದ ಬಳಲುತ್ತಿದ್ದರು. ವಿದೇಶ ಪ್ರವಾಸದ ಹಿನ್ನಲೆ ಹಾಗೂ ಕೊರೋನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು.

ರೋಗಿಯ ಗಂಟಲಿನ ದ್ರವ (ಥ್ರೋಟ್ ಸ್ವಾಬ್) ವನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ಈ ನಡುವೆ ರೋಗಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿತ್ತು. ವರದಿಯ ಆಧಾರದಲ್ಲಿ ವ್ಯಕ್ತಿಯನ್ನು ಮನೆಗೆ ಕಳುಹಿಸುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಆರೋಗ್ಯಾಧಿಕಾರಿ ತಿಳಿಸಿದ್ದರು. ಇದೀಗ ವರದಿ ಜಿಲ್ಲಾಸ್ಪತ್ರೆ ವೈದ್ಯರ ಕೈ ಸೇರಿದ್ದು, ಆತಂಕ ನಿವಾರಣೆಯಾಗಿದೆ.

Also Read  ಉಪ್ಪಿನಂಗಡಿ: ಕೋವಿಡ್-19 ಹಿನ್ನಲೆ ತೆಕ್ಕಾರಿನಲ್ಲಿ ಸರಳ ಈದ್ ಮೀಲಾದ್ ಆಚರಣೆ

error: Content is protected !!
Scroll to Top