ಬೈಂದೂರು: ಬೈಕುಗಳ ಢಿಕ್ಕಿ; ಓರ್ವ ಮೃತ್ಯು

ಕುಂದಾಪುರ, ಮಾ.6: ಎರಡು ಬೈಕ್‌ಗಳು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟು, ಇನ್ನೊಬ್ಬ ಸವಾರ ಮತ್ತು ಇಬ್ಬರು ಸಹಸವಾರರು ಗಂಭೀರ ಗಾಯಗೊಂಡ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೋಳಿಹೊಳೆ ಕೊಲ್ಲೂರು ರಸ್ತೆಯ ಗೋಳಿಹೊಳೆ ಮಸೀದಿ ಸಮೀಪ ಬುಧವಾರ ರಾತ್ರಿ ನಡೆದಿದೆ. ಮೃತರನ್ನು ಬೈಕ್ ಸವಾರನನ್ನು ಸಾರ್ಕಲ್ಲು ತೊಂಡ್ಳೆ ನಿವಾಸಿ ಸುಧೀರ್ ಗೌಡ(25) ಎಂದು ಗುರುತಿಸಲಾಗಿದೆ.

ಸುಧೀರ್ ಗೌಡ ಹಾಗೂ ಆತನ ಸ್ನೇಹಿತ ಸುರೇಂದ್ರ ಗೌಡ ಇಬ್ಬರು ತೊಂಡ್ಳೆಯಿಂದ ಗೋಳಿಹೊಳೆ ಮೂರುಕೈಗೆ ಬೈಕಿನಲ್ಲಿ ಹೋಗಿದ್ದರೆನ್ನಲಾಗಿದೆ. ಇದೇ ಸಂದರ್ಭ ಗೋಳಿಹೊಳೆ ಮಸೀದಿ ಸಮೀಪದ ತಿರುವಿನಲ್ಲಿ ಕೊಲ್ಲೂರು ಕಡೆಯಿಂದ ನವೀನ ಎಂಬುವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಸುದೀರ್ ಚಲಾಯಿಸುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

Also Read  ರೇಷನ್ ಕಾರ್ಡ್ ಇಲ್ಲದವರಿಗೆ ಸಂತಸದ ಸುದ್ದಿ ► ಫೆಬ್ರವರಿ 26 ರಂದು ಕಡಬದಲ್ಲಿ 'ಸ್ಥಳದಲ್ಲೇ ಅರ್ಜಿ ಸಲ್ಲಿಸಿ - ರೇಷನ್ ಕಾರ್ಡ್ ವಿತರಣೆ'

ಅಪಘಾತದ ರಭಸಕ್ಕೆ ಸುದೀರ ಗೌಡರ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸುಧೀರ ಬೈಕಿನಲ್ಲಿದ್ದ ಸುರೇಂದ್ರ ಗೌಡ, ಇನ್ನೊಂದು ಬೈಕ್ ಸವಾರ ನವೀನ್ ಹಾಗೂ ಹಿಂಬದಿ ಸವಾರ ತೆಗ್ಗರ್ಸೆ ನಿವಾಸಿ ಶ್ರೀನಿವಾಸ ಶೇರುಗಾರ್ ಎಂಬವರಿಗೆ ತಲೆಗೆ, ಕೈಗೆ ಗಂಭೀರ ಗಾಯಗಳಾಗಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top