ಬಂಟ್ವಾಳ: ಪಿಕಪ್-ರಿಕ್ಷಾ ಢಿಕ್ಕಿ ಹೊಡೆದು ಐವರಿಗೆ ಗಾಯ

ಬಂಟ್ವಾಳ, ಮಾ.5: ಪಿಕಪ್ ವಾಹನ ಮತ್ತು ರಿಕ್ಷಾ ಮುಖಾಮುಖಿ ಢಿಕ್ಕಿಯಾದ ಪರಿಣಾಮ ರಿಕ್ಷಾ ಚಾಲಕ, ಪಿಕಪ್ ಚಾಲಕ ಸೇರಿದಂತೆ ಐವರಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ಸಂಜೆ ಬಂಟ್ವಾಳ ಕೆಳಗಿನ ಪೇಟೆಯಲ್ಲಿ ನಡೆದಿದೆ.

ಗಾಯಗೊಂಡವರನ್ನು ರಿಕ್ಷಾ ಚಾಲಕ ಪರ್ಲ ನಿವಾಸಿ ಜೆರಾಲ್ಡ್ ಸಾಂಕ್ತಿಸ್, ಪಿಕಪ್ ಚಾಲಕ ಗೌತಮ್ ಹಾಗೂ ರಿಕ್ಷಾದಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬಿ.ಸಿ.ರೋಡಿನಿಂದ ಬಂಟ್ವಾಳ ಕಡೆಗೆ ಸಾಫ್ಟ್ ಡ್ರಿಂಕ್ಸ್‌ಗಳನ್ನು ಕೊಂಡು ಹೋಗುತ್ತಿದ್ದ ಪಿಕಪ್ ವಾಹನ ಬಂಟ್ವಾಳದಿಂದ ಬಿ.ಸಿ.ರೋಡು ಕಡೆಗೆ ಬರುತ್ತಿದ್ದ ಸರ್ವೀಸ್ ರಿಕ್ಷಾಕ್ಕೆ ಢಿಕ್ಕಿಯಾಗಿ ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ರಸ್ತೆ ಮಧ್ಯ ದಲ್ಲಿ ಪಲ್ಟಿಯಾಗಿದೆ.

ಪಿಕಪ್ ವಾಹನ ರಸ್ತೆಯಲ್ಲಿ ಅಡ್ಡಲಾಗಿ ಬಿದ್ದ ಕಾರಣ ಸ್ವಲ್ಪಹೊತ್ತು ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಸುಮಾರು ಒಂದು ಗಂಟೆಗಳ ಕಾಲ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡದೆ ಬಳಿಕ ವಾಹನ ತೆರವುಗೊಳಿಸಲಾಯಿತು. ಅಪಘಾತದ ಪರಿಣಾಮ ರಸ್ತೆಯಲ್ಲಿ ಸೋಡಾ ಬಾಟಲಿ ಚೆಲ್ಲಾಪಿಲ್ಲಿಯಾಗಿತ್ತು. ಸ್ಥಳೀಯ ಯುವಕರು ಸೋಡಾ ಬಾಟಲಿ ಗಳನ್ನು ಸ್ವಯಂಸೇವಕ ರಾಗಿ ತೆರವುಗೊಳಿಸಿದರು.
ಸ್ಥಳಕ್ಕೆ ಟ್ರಾಫಿಕ್ ಎಸ್ಸೈ ರಾಜೇಶ್ ಕೆ.ವಿ., ಎಎಸ್ಸೈ ಕುಟ್ಟಿ, ಬಾಲಕೃಷ್ಣ, ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!

Join the Group

Join WhatsApp Group