ಯುವತಿಯೊಂದಿಗೆ ನಾಪತ್ತೆಯಾದ ಸ್ವಾಮೀಜಿ ಮಂಗಳೂರಿನಲ್ಲಿ ಪತ್ತೆ

ಮಂಗಳೂರು, ಮಾ.5: ಕೋಲಾರದ ಹೊಳಲಿ ಭೀಮಲಿಂಗೇಶ್ವರ ಸೇವಾಶ್ರಮದ ಪೀಠಾಧಿಪತಿ ದತ್ತಾತ್ರೇಯ ಅವಧೂತ ಸ್ವಾಮೀಜಿ (40) ಪಾದಪೂಜೆ ಮಾಡುತ್ತಿದ್ದ ಯುವತಿಯೊಂದಿಗೆ ನಾಪತ್ತೆಯಾಗಿದ್ದು, ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಫೆ.27ರಂದು ಸ್ವಾಮೀಜಿ ಯುವತಿಯೊಂದಿಗೆ ನಾಪತ್ತೆಯಾಗಿದ್ದರು. ಕೋಲಾರ ತಾಲೂಕು ಹೊಳಲಿ ಗ್ರಾಮದ 20 ವರ್ಷದ ಯುವತಿಯೊಂದಿಗೆ ಸ್ವಾಮೀಜಿ ನಾಪತ್ತೆಯಾಗಿದ್ದು, ಯುವತಿಯ ಸೋದರ ಮಾವ ಶಂಕರ್ ಕೋಲಾರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.

ಬಳಿಕ ಯುವತಿಯ ಅಣ್ಣನಿಗೆ ಸ್ವಾಮೀಜಿ ಕರೆ ಮಾಡಿದ್ದು, ತಿರುಪತಿಯಲ್ಲಿ ತಾವು ಮದುವೆಯಾಗಿರುವುದಾಗಿ ತಿಳಿಸಿದ್ದರು. ಮತ್ತೆ ಅವರ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಇದೀಗ ಸ್ವಾಮೀಜಿ ಮಂಗಳೂರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

Also Read  ಪಾಲಿಕೆ ವ್ಯಾಪ್ತಿಯಲ್ಲಿ ನೋಂದಣಿಯಾದ ಪರಿಶಿಷ್ಟ ಜಾತಿ/ ಪಂಗಡದ ಸಂಘಟನೆಗಳ ವಿವರ ನೀಡಲು ಸೂಚನೆ

error: Content is protected !!
Scroll to Top