ಉಡುಪಿ: 33 ಕೆಜಿ ಗಾಂಜಾ ನಾಶಪಡಿಸಿದ ಪೊಲೀಸರು

ಉಡುಪಿ, ಮಾ.4: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಪಡುಬಿದ್ರೆ ನಂದಿಕೂರಿನ ಕೈಗಾರಿಕಾ ವಲಯದಲ್ಲಿರುವ ಆಯುಷ್ ಎನ್‌ವೈರ್‌ಟೆಕ್ ಪ್ರೈ.ಲಿಮಿಟೆಡ್‌ನಲ್ಲಿ ನ್ಯಾಯಾಲಯದ ಆದೇಶದಂತೆ ನಾಶಪಡಿಸಲಾಯಿತು.

ಜಿಲ್ಲೆಯ ಸೆನ್ ಅಪರಾಧ ಠಾಣೆಯ 11 ಪ್ರಕರಣಗಳಲ್ಲಿ 31.84 ಕೆ.ಜಿ., ಮಣಿಪಾಲ ಠಾಣೆಯ ನಾಲ್ಕು ಪ್ರಕರಣಗಳಲ್ಲಿ 1.56 ಕೆ.ಜಿ. ಹಾಗೂ ಉಡುಪಿ ನಗರ ಠಾಣೆಯ ಎರಡು ಪ್ರಕರಣಗಳಲ್ಲಿ 1.67 ಕೆ.ಜಿ. ಸೇರಿದಂತೆ ಒಟ್ಟು 17 ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡ ಒಟ್ಟು 32 ಕೆಜಿ 883 ಗ್ರಾಂ ಗಾಂಜಾವನ್ನು ನಾಶಪಡಿಸಲಾಯಿತು.

ಈ ಪ್ರಕ್ರಿಯೆಯಲ್ಲಿ ಗಾಂಜಾ ವಿಲೇವಾರಿ ಸಮಿತಿ ಅಧ್ಯಕ್ಷರಾಗಿರುವ ಎಸ್ಪಿ ಎನ್.ವಿಷ್ಣುವರ್ಧನ, ಸಮಿತಿಯ ಸದಸ್ಯರಾಗಿರುವ ಡಿವೈಎಸ್ಪಿ ಟಿ.ಆರ್. ಜೈಶಂಕರ್, ಕಾಪು ವೃತ್ತದ ನಿರೀಕ್ಷಕ ಮಹೇಶ್ ಪ್ರಸಾದ್, ಸೆನ್ ಅಪರಾಧ ಠಾಣೆಯ ನಿರೀಕ್ಷಕ ಸೀತಾರಾಮ್, ಮಣಿಪಾಲ ಎಸ್ಸೈ ಶ್ರೀಧರ ನಂಬಿಯಾರ್, ಪಡುಬಿದ್ರೆ ಎಸ್ಸೈ ಸುಬ್ಬಣ್ಣ, ಉಡುಪಿ ನಗರ ಎಸ್ಸೈ ಸದಾಶಿವ ಗವರೋಜಿ, ಡಿ.ಸಿ.ಆರ್.ಬಿ. ಎಸ್ಸೈ ಪ್ರಕಾಶ್, ಆಯುಷ್ ಸಂಸ್ಥೆಯ ಉಪಾಧ್ಯಕ್ಷ ಡಿ. ಮಾರುತಿ ಗೌಡ ಹಾಗೂ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.

Also Read  ಕಾರ್ಯನಿರತ ಪತ್ರಕರ್ತರನ್ನು ಕೋವಿಡ್ ವಿಮೆ ವ್ಯಾಪ್ತಿಗೆ ಒಳಪಡಿಸಬೇಕು ➤ H.D. ಕುಮಾರಸ್ವಾಮಿ

error: Content is protected !!
Scroll to Top