ರಣಜಿ ಟ್ರೋಫಿ ಸೆಮಿಫೈನಲ್ ➤ ಕರ್ನಾಟಕ ತಂಡವನ್ನು ಮಣಿಸಿದ ಬಂಗಾಳ

(ನ್ಯೂಸ್ ಕಡಬ) newskadaba.com ಕೋಲ್ಕತ್ತಾ, ಮಾ.03. ಕೋಲ್ಕತ್ತಾದ ಈಡೆನ್ ಗಾರ್ಡನ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಬಂಗಾಳ ತಂಡದ ವಿರುದ್ದ ಕರ್ನಾಟಕವು 174 ರನ್ ಗಳ ಅಂತರದ ಹೀನಾಯ ಸೋಲನ್ನು ಅನುಭವಿಸಿತು.


325 ರನ್‌ಗಳನ್ನು ಪಡೆದು ಬೀಗಿದ್ದ ಬಂಗಾಳವನ್ನು ಮಣಿಸಲು ಹರಸಾಹಸಪಟ್ಟ ಕರ್ನಾಟಕ ತಂಡವು 55.3 ಓವರ್‌ಗಳಲ್ಲಿ 177 ರನ್‌ಗಳಿಗೆ ತೃಪ್ತಿಪಡುತ್ತಾ ತನ್ನೆಲ್ಲಾ ವಿಕೆಟುಗಳನ್ನು ಕಳೆದುಕೊಂಡಿತು. ಕರ್ನಾಟಕ ತಂಡದ ಭರವಸೆಯಾಗಿದ್ದ ದೇವದತ್ ಪಡಿಕ್ಕಲ್ ಹಾಗೂ ಮನೀಶ್ ಪಾಂಡೆಯವರು ಔಟ್ ಆಗುವುದರೊಂದಿಗೆ ಕರ್ನಾಟಕ ತಂಡದ ಬಲ ಕುಸಿದು ಹೋಯಿತು. 129 ಎಸೆತಗಳನ್ನು ಎದುರಿಸಿದ ದೇವದತ್ ಪಡಿಕ್ಕಲ್ 62 ರನ್ ಗೆ ತೃಪ್ತಿಪಟ್ಟರು.

Also Read  ಶರಣ್ ಪಂಪ್ ವೆಲ್ ವಿರುದ್ದ ಸುಳ್ಳು ಸುದ್ದಿ- ಕಠಿಣ ಕ್ರಮ ಜರುಗಿಸದಿದ್ದಲ್ಲಿ ಉಗ್ರ ಹೋರಾಟ ➤ ಹಿಂದೂ ಸಂಘಟನೆಗಳ ಎಚ್ಚರಿಕೆ..❗

error: Content is protected !!
Scroll to Top