ಕುಂದಾಪುರ: ‘ಪಾಕಿಸ್ತಾನ ಝಿಂದಾಬಾದ್’ ಘೋಷಣೆ ಕೂಗಿದ ಆರೋಪಿ ಪೊಲೀಸ್ ವಶಕ್ಕೆ

ಕುಂದಾಪುರ, ಮಾ.2: ‘ಪಾಕಿಸ್ತಾನ ಝಿಂದಾಬಾದ್’ ಘೋಷಣೆ ಕೂಗಿದ ಆರೋಪದಲ್ಲಿ ಓರ್ವನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕುಂದಾಪುರದ ಕೋಡಿ ನಿವಾಸಿ ರಾಘವೇಂದ್ರ ಗಾಣಿಗ(43) ಎಂದು ಗುರುತಿಸಲಾಗಿದೆ. ಈತ ಕುಂದಾಪುರದ ಸರಕಾರಿ ಕಚೇರಿಗಳ ಸಂಕೀರ್ಣ ಮಿನಿ ವಿಧಾನ ಸೌಧದ ಒಳಗೆ ಎನ್ನುತ್ತಾ ನಿರಂತರವಾಗಿ ‘ಪಾಕಿಸ್ತಾನಕ್ಕೆ ಝಿಂದಾಬಾದ್’ ಘೋಷಣೆ ಕೂಗಿರುವ ವೀಡಿಯೊ ವೈರಲ್ ಆಗಿದೆ.

ಸೋಮವಾರ ಬೆಳಗ್ಗೆ 10 ಗಂಟೆಯ ಸುಮಾರಿ ಘಟನೆ ನಡೆದಿದ್ದು, ಮಾಹಿತಿ ತಿಳಿದು ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಸೋಮವಾರ ಬೆಳಗ್ಗೆ ರಾಘವೇಂದ್ರ ಗಾಣಿಗ ಕುಂದಾಪುರ ಕುಂದಾಪುರದ ಸರಕಾರಿ ಕಚೇರಿಗಳ ಸಂಕೀರ್ಣ ಮಿನಿ ವಿಧಾನಸೌಧಕ್ಕೆ ಬಂದಿದ್ದು, ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆಯೇ ‘ಪಾಕಿಸ್ತಾನ ಝಿಂದಾಬಾದ್’ ಎನ್ನುವ ಘೋಷಣೆಗಳನ್ನು ಕಾರಿಡಾರ್ ಉದ್ದಕ್ಕೂ ಕೂಗುತ್ತಾ ಸಾಗಿದ್ದಾನೆ.

Also Read  ಪಣಂಬೂರು: ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು

ಇದನ್ನು ಗಮನಿಸಿದ ಸಾರ್ವಜನಿಕರು ಅದನ್ನು ವೀಡಿಯೊ ರೆಕಾರ್ಡ್ ಮಾಡಿಕೊಂಡಿದ್ದು, ಕುಂದಾಪುರ ಪೊಲೀಸರಿಗೆ ಸುದ್ಧಿ ಮುಟ್ಟಿಸಿದ್ದಾರೆ. ಆರೋಪಿ ರಾಘವೇಂದ್ರ ಗಾಣಿಗ ಮಾನಸಿಕ ಅಸ್ವಸ್ಥನಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಎಂಟು ವರ್ಷಗಳ ಹಿಂದೆ ಕುಂದಾಪುರದ ಖಾಸಗಿ ಶಾಲೆಯಲ್ಲಿ ಹಿಂದಿ ಶಿಕ್ಷಕನಾಗಿದ್ದ ಈತ ಇಂದು ಚಿಕಿತ್ಸೆಗಾಗಿ ತನ್ನ ತಾಯಿ ಜೊತೆ ಆಸ್ಪತ್ರೆಗೆ ಬಂದಿದ್ದಾನೆ. ತಾಯಿಯ ಕಣ್ತಪ್ಪಿಸಿ ಮಿನಿ ವಿಧಾನಸೌಧಕ್ಕೆ ಬಂದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!
Scroll to Top