ಕಡಬ: ಟೆಂಪೊ – ಬೈಕ್ ಅಪಘಾತದಲ್ಲಿ ಓರ್ವ ಮೃತಪಟ್ಟ ಪ್ರಕರಣ ➤ ಸಹೋದ್ಯೋಗಿ ಕಾರ್ಮಿಕರಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಮಾ.01. ಠಾಣಾ ವ್ಯಾಪ್ತಿಯ ಬೊಳ್ಳೂರು ದೇವಸ್ಥಾನ ಸಮೀಪ ಭಾನುವಾರದಂದು ನಡೆದ 407 ಟೆಂಪೋ ಹಾಗೂ ದ್ವಿಚಕ್ರ ವಾಹನ ನಡುವಿನ ಅಪಘಾತದಲ್ಲಿ ಮೃತಪಟ್ಟ ಮೇಘರಾಜ್ ಸಾವಿಗೆ ಕಾರಣವಾದ ಟೆಂಪೋ ಚಾಲಕನ ವಿರುದ್ಧ ಪ್ರಕರಣ ದಾಖಲಿಸಬೇಕೆ.ಮದು ಆಗ್ರಹಿಸಿ ರಾಜಸ್ಥಾನದ ಕಾರ್ಮಿಕರು ಆಗ್ರಹಿಸಿದ್ದಾರೆ.

ಮೃತ ಮೇಘರಾಜ್ ಬೊಳ್ಳೂರು ಮಿತ್ತೋಡಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಇಳಿಜಾರಿನಲ್ಲಿ ದ್ವಿಚಕ್ರ ವಾಹನ ಸ್ಕಿಡ್ ಆಗಿದ್ದರಿಂದ ತಿರುವಿನಲ್ಲಿ ಉರುಳಿ ಬಿದ್ದಿದ್ದರು. ಈ ವೇಳೆ ವಿರುದ್ಧ ದಿಕ್ಕಿನಿಂದ ಆಗಮಿಸುತ್ತಿದ್ದ ಟೆಂಪೋ ಮೇಘರಾಜ್ ತಲೆಯ ಮೇಲೆ ಹರಿದಿದ್ದರಿಂದ ತಲೆ ಜಜ್ಜಿ ಸ್ಥಳದಲ್ಲೇ ಮೃತಪಟ್ಟಿದ್ದರು. ಆದರೆ ಮೇಘರಾಜ್ ಸ್ನೇಹಿತರು ಹೇಳುವ ಪ್ರಕಾರ ಲಾರಿಯಡಿಗೆ ಮೇಘರಾಜ್ ಬಿದ್ದಿದ್ದು ಲಾರಿ ಚಾಲಕನ ವಿರುದ್ಧ ಕೇಸು ದಾಖಲಿಸಬೇಕೆಂದು ಆಗ್ರಹಿಸಿದರು. ಕಡಬ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದ ಮುಂಭಾಗದಲ್ಲಿ ಸೇರಿದ್ದ ರಾಜಸ್ಥಾನ ಮೂಲದ ಕಾರ್ಮಿಕರು ತಮ್ಮ ಸಹೋದ್ಯೋಗಿಯ ಸಾವಿಗೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಲಕಾಲ ಪ್ರತಿಭಟಿಸಿದರು.

Also Read  ಜಿಲ್ಲಾ ಆಯುಷ್ ಇಲಾಖೆ ಹಾಗೂ ಆಯುಷ್ ಫೌಂಡೇಶನ್ ದ. ಕ ಇವರ ವತಿಯಿಂದ ➤ ಡೆಂಗಿ ನಿಯಂತ್ರಣ: ಆಯುಷ್ ವೈದ್ಯರಿಗೆ ತರಬೇತಿ

error: Content is protected !!
Scroll to Top