ಉಡುಪಿ: ಕಾಂಗ್ರೆಸ್‌ನ ಹಿರಿಯ ಮುಖಂಡ ಕೃಷ್ಣರಾಜ್ ಸರಳಾಯ ಆತ್ಮಹತ್ಯೆ

ಉಡುಪಿ, ಫೆ.29: ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಉಡುಪಿಯ ಖ್ಯಾತ ಪಟಾಕಿ ಉದ್ಯಮಿ ಕೆ. ಕೃಷ್ಣರಾಜ್ ಸರಳಾಯ(87) ಇಂದು ಮಧ್ಯಾಹ್ನ ವೇಳೆ ಪಣಿಯಾಡಿಯಲ್ಲಿರುವ ತನ್ನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.

ಮನೆಯಲ್ಲಿ ಒಂಟಿಯಾಗಿ ಬದುಕುತ್ತಿದ್ದ ಇವರು, ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಇವರ ಇಬ್ಬರು ಪುತ್ರಿಯರು ಮದುವೆಯಾಗಿ ಆಸ್ಟ್ರೇಲಿಯಾ ಹಾಗೂ ಬೆಂಗಳೂರಿನಲ್ಲಿ ನೆಲೆಸಿದ್ದರು. ಕಾಂಗ್ರೆಸ್ ಮುಖಂಡರಾಗಿದ್ದ ಇವರು, ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಸಹಕಾರಿ ಧುರೀಣರಾಗಿದ್ದ ಇವರು, ಉಡುಪಿ ಟೌನ್  ಕೋಅಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಲವು ವರ್ಷ ಗಳಿಂದ ಇವರು ಉಡುಪಿಯಲ್ಲಿ ಪಟಾಕಿ ಉದ್ಯಮ ನಡೆಸುತ್ತಿದ್ದರು.

Also Read  ಅಮೆರಿಕಾ: ಕಟ್ಟಡಕ್ಕೆ ಬಡಿದು ವಿಮಾನ ಪತನ: 2 ಸಾವು , 18 ಜನರಿಗೆ ಗಂಭೀರ ಗಾಯ

error: Content is protected !!
Scroll to Top