ಮಾಣಿ: ಬಡ ಅನಾಥ ವೃದ್ಧೆಯ ಶವ ಸಂಸ್ಕಾರಕ್ಕೆ ನೆರವಾದ ಹಿಂದೂ – ಮುಸ್ಲಿಮರು

(ನ್ಯೂಸ್ ಕಡಬ) newskadaba.com ಮಾಣಿ, ಫೆ.29. ಅನಾರೋಗ್ಯದಿಂದ ಮೃತಪಟ್ಟ ಅನಾಥ ವೃದ್ಧ ಮಹಿಳೆಯೋರ್ವರ ಮೃತದೇಹದ ಅಂತ್ಯಸಂಸ್ಕಾರಕ್ಕೆ ಜಾತಿ ಮತ ಭೇದ ಮರೆತು ಜೊತೆ ಸೇರಿ ಶವಾಗಾರಕ್ಕೆ ಕಳುಹಿಸಿ ಕೊಟ್ಟು ಮಾನವೀಯತೆ ಮೆರೆದ ಘಟನೆ ಶನಿವಾರದಂದು ಮಾಣಿ ಸಮೀಪದ ಕೊಡಾಜೆ ಎಂಬಲ್ಲಿ ನಡೆದಿದೆ.

ಕೊಡಾಜೆ ಮಸೀದಿಯ ಸಮೀಪದ ಒಂದು ಮನೆಯಲ್ಲಿ ಒಬ್ಬಳು ಬಡ ವೃದ್ಧ ಮಹಿಳೆಯು ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಸಿಕ್ಕ ತಕ್ಷಣ ಆ ಮನೆಗೆ ತೆರಳಿದ ಕೊಡಾಜೆ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ರಾಜ್ ಕಮಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ, ಹಬೀಬ್ ಕೊಡಾಜೆ, ಹಾಜಿ ಉಮ್ಮರ್ ಫೈರೋಝ್, ಇಸ್ಮಾಯಿಲ್ ಫೈರೋಝ್, ಬದ್ರುದ್ದೀನ್ ಇನಾಮ್ ಮಾಣಿ, ಇಬ್ರಾಹಿಮ್, ರವೂಫ್ ಕೊಡಾಜೆ, ಬಾಲಕೃಷ್ಣ ಆಳ್ವ, ಜನಾರ್ಧನ, ತ್ವಾಹ, ತ್ವಾಹಿರ್, ರಾಝೀ, ರಾಫಿ ಮೊದಲಾದವರು ಖಾಸಗಿ ಆಂಬುಲೆನ್ಸ್ ಕರೆಸಿ ಮೃತದೇಹವನ್ನು ಪುತ್ತೂರಿನ ಶವಾಗಾರಕ್ಕೆ ಕಳುಹಿಸಿಕೊಟ್ಟರು. ಈ ಮೂಲಕ ದೇಶದಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೆ ಎನ್ನುವುದನ್ನು ತೋರಿಸಿಕೊಟ್ಟರು.

Also Read  ಕುಕ್ಕೆ ಶ್ರೀ ಸುಬ್ರಹ್ಮಣ್ಯ ರೈಲು ನಿಲ್ದಾಣ ಮರುನಾಮಕರಣಕ್ಕೆ ಮನವಿ

error: Content is protected !!
Scroll to Top