ಕಡಬ: ‘ಡೈಮಂಡ್ ಸ್ಟೀಲ್ & ಸಿಮೆಂಟ್’ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಫೆ.29. ಕಳೆದ ಕೆಲವು ದಶಕಗಳಿಂದ ಉದ್ಯಮ ಕ್ಷೇತ್ರದಲ್ಲಿ ಕಡಬದಲ್ಲಿ ಹೆಸರುವಾಸಿಯಾಗಿರುವ ಸಾಹಿರಾ ಗ್ರೂಪ್ ನ ಸ್ಟಾರ್ ಟ್ರೇಡಿಂಗ್ ಕಂಪೆನಿಯ ಅಂಗಸಂಸ್ಥೆ ‘ಡೈಮಂಡ್ ಸ್ಟೀಲ್ & ಸಿಮೆಂಟ್’ ಕಡಬದ ಕಳಾರ ಸಮೀಪದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಸಮೀಪ ಶುಭಾರಂಭಗೊಂಡಿತು.

ಕಡಬ ಟೌನ್ ಜುಮಾ ಮಸೀದಿಯ ಖತೀಬರಾದ ಇಬ್ರಾಹಿಂ ದಾರಿಮಿಯವರು ದುವಾಶೀರ್ವಾದದೊಂದಿಗೆ ಸಂಸ್ಥೆಯನ್ನು ಉದ್ಘಾಟಿಸಿದರು. ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಕಾರ್ಯದರ್ಶಿ ಹಮೀದ್, ಕಡಬ ಗ್ರಾಮ ಪಂಚಾಯತ್ ಸದಸ್ಯ ಹನೀಫ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ಶಗೀರ್ ಅತಿಥಿಗಳನ್ನು ಸ್ವಾಗತಿಸಿ, ನಮ್ಮಲ್ಲಿ ಸ್ಟೀಲ್, ಸಿಮೆಂಟ್, ಪೈಪ್, ಟಿಎಂಟಿ ಕಂಬಿಗಳು, ವಾಟರ್ ಟ್ಯಾಂಕ್, ಪಿ.ವಿ.ಸಿ. ಪೈಪ್, ಸಿಮೆಂಟ್ ಶೀಟ್, ಹೋಲೋ ಬ್ಲಾಕ್, ದಾರಂದ, ಕಿಟಕಿ ಮೊದಲಾದ ಹಾರ್ಡ್‌ವೇರ್ ಸಾಮಾಗ್ರಿಗಳು ಶುಭಾರಂಭದ ಪ್ರಯುಕ್ತ ಆಕರ್ಷಕ ದರದಲ್ಲಿ ಲಭ್ಯವಿದ್ದು, ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 8496088299 ಸಂಖ್ಯೆಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

Also Read  ಇಂದು(ಆ. 05) ಬಂಟ್ವಾಳ ತಾ.ಪಂ. ಸಭೆ

error: Content is protected !!
Scroll to Top