ಹೊಸ್ಮಠ ಸೇತುವೆಯ ಬಳಿ ತೋಟಕ್ಕೆ ಉರುಳಿ ಬಿದ್ದ ಬೊಲೆರೋ ➤ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಫೆ.29. ಮಹೀಂದ್ರಾ ಬೊಲೆರೋ ವಾಹನವೊಂದು ರಸ್ತೆ ಬದಿಯ ತೋಟಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಹೊಸ್ಮಠ ಸೇತುವೆಯ ಬಳಿ ನಡೆದಿದೆ.

ಹೊಸ್ಮಠ ಸೇತುವೆಯ ವೇಗ ನಿಯಂತ್ರಕವನ್ನು ದಾಟಿದ ಬೊಲೆರೋ ರಸ್ತೆ ಬದಿಯ ತೋಟಕ್ಕೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಬೊಲೆರೋ ವಾಹನದಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಬೊಲೆರೋದಲ್ಲಿ ಇದ್ದವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸೇತುವೆಯ ಇಕ್ಕೆಲಗಳಲ್ಲಿ ಹಾಕಿರುವ ವೇಗ ನಿಯಂತ್ರಕ (ಹಂಪ್ಸ್) ಅವೈಜ್ಞಾನಿಕ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದ್ದು, ಇದರಿಂದಾಗಿ ದಿನನಿತ್ಯ ಹಲವಾರು ಬೈಕುಗಳು ಉರುಳಿ ಬೀಳುತ್ತಿವೆ.

Also Read  ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ 24 ಆರೋಪಿಗಳು ಅರೆಸ್ಟ್

error: Content is protected !!
Scroll to Top