ಕಡಬ: ದಶಕಗಳ‌ ಹಿಂದಿನ ಸಮಾಧಿಯನ್ನು ಅಗೆದಾಗ ಕಂಡುಬಂತು ಅಚ್ಚರಿ ➤ ಅದೇನೆಂದರೆ…!!

(ನ್ಯೂಸ್ ಕಡಬ) newskadaba.com ಕಡಬ, ಫೆ.29. ಮೃತಪಟ್ಟು ದಶಕಗಳು ಕಳೆದರೂ ದಫನಗೈದ ಸಮಾಧಿಯೊಳಗಿನ ಶ್ವೇತ ವಸ್ತ್ರವು ಹಾಗೇ ಕಂಡುಬಂದ ದೃಶ್ಯವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಶುಕ್ರವಾರದಂದು ಕಡಬದ ವೃದ್ಧೆಯೋರ್ವರು ಮೃತಪಟ್ಟಿದ್ದು, ದಫನಗೈಯಲೆಂದು
ಕಡಬದ ಕೇಂದ್ರ ಜುಮಾ ಮಸೀದಿಯ ಖಬರ್ ಸ್ಥಾನದಲ್ಲಿ ಗುಂಡಿ ತೋಡುತ್ತಿದ್ದಾಗ ಸುಮಾರು 20 ವರ್ಷ ಹಳೆಯದಾದ ಸಮಾಧಿಯ ಒಂದು ಪಾರ್ಶ್ವವು ತೆರೆದಿದೆ. ಅದರೊಳಗೆ ಮೃತದೇಹದ ಮೇಲೆ ಹಾಕಲ್ಪಡುವ ಬಿಳಿ ವಸ್ತ್ರವು ಯಾವುದೇ ರೀತಿಯಲ್ಲಿ ಕೊಳೆಯಾಗದೆ ಹಾಗೆಯೇ ಇರುವುದನ್ನು ಕಂಡು ಆಶ್ಚರ್ಯದಿಂದ ಗುಂಡಿ ತೋಡುತ್ತಿರುವವರ ಪೈಕಿ ಯಾರೋ ಅದನ್ನು ವೀಡಿಯೋ ಮಾಡಿ ವಾಟ್ಸ್ಅಪ್ ನಲ್ಲಿ ಹಾಕಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸುಮಾರು 15 ರಿಂದ 20 ವರ್ಷಗಳಷ್ಟು ಹಿಂದೆ ದಫನಗೈಯಲ್ಪಟ್ಟ ಸಮಾಧಿಯೊಳಗಿನ ಬಟ್ಟೆಯು ಏನೂ ಆಗದೇ ಇರುವುದು ಆಶ್ಚರ್ಯವೇ ಸರಿ.

Also Read  ಭಾರೀ ಮಳೆಯಿಂದಾಗಿ ಸುಬ್ರಹ್ಮಣ್ಯ - ಸಿರಿಬಾಗಿಲು ಮಧ್ಯೆ ಭೂಕುಸಿತ ► ಮಂಗಳೂರು - ಬೆಂಗಳೂರು ರೈಲು ಸಂಚಾರ ಸ್ಥಗಿತ

error: Content is protected !!
Scroll to Top