ಮಂಗಳೂರು ಮನಪಾ ನೂತನ ಮೇಯರ್ ಆಗಿ ದಿವಾಕರ, ಉಪಮೇಯರ್ ಆಗಿ ವೇದಾವತಿ ಆಯ್ಕೆ

ಮಂಗಳೂರು, ಫೆ.28: ಮಂಗಳೂರು ಮಹಾನಗರ ಪಾಲಿಕೆ 21ನೇ ಅವಧಿಯ ನೂತನ ಮೇಯರ್ ಆಗಿ ಬಿಜೆಪಿ ಹಿರಿಯ ಸದಸ್ಯ ಹಾಗೂ 46ನೇ ಕಂಟೋನ್ಮೆಂಟ್ ವಾರ್ಡ್‌ನ ಕಾರ್ಪೋರೇಟರ್‌ದಿವಾಕರ ಪಾಂಡೇಶ್ವರ ಆಯ್ಕೆಗೊಂಡಿದ್ದಾರೆ. ಅಲ್ಲದೆ ಉಪ ಮೇಯರ್ ಆಗಿ ಬಿಜೆಪಿಯ 9ನೇ ಕುಳಾಯಿ ವಾರ್ಡ್ ಕಾರ್ಪೋರೇಟರ್ ವೇದಾವತಿ ಆಯ್ಕೆಗೊಂಡಿದ್ದಾರೆ.

ಪಾಲಿಕೆಗೆ ನೂತನವಾಗಿ ಆಯ್ಕೆಯಾಗಿರುವ 60 ಕಾರ್ಪೋರೇಟರ್‌ಗಳ ಪ್ರಮಾಣವಚನ ನೆರವೇರಿದ್ದು ಆ ಬಳಿಕ ಅಸ್ತಿತ್ವಕ್ಕೆ ಬಂದ ಪಾಲಿಕೆಯ ನೂತನ ಪರಿಷತ್‌ನಲ್ಲಿ ಮೇಯರ್ ಆಯ್ಕೆ ಚುನಾವಣೆ ನಡೆದಿತ್ತು. ಮೈಸೂರು ವಿಭಾಗೀಯ ಪ್ರಾದೇಶಿಕ ಆಯುಕ್ತರಾದ ವಿ. ಯಶವಂತ್ ನೇತೃತ್ವದಲ್ಲಿ ಈ ಚುನಾವಣೆ ನಡೆದಿದೆ. ಮೇಯರ್ ಸ್ಥಾನ ಹಿಂದುಳಿದ ವರ್ಗ ‘ಎ’ ಗೆ ಮೀಸಲಾಗಿದ್ದರೆ ಉಪಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗಾಗಿ ಮೀಸಲಾಗಿತ್ತು. ಪಾಲಿಕೆಯಲ್ಲಿ ಬಹುಮತವಿದ್ದ ಬಿಜೆಪಿಯಿಂದ ದಿವಾಕರ್ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರೆ ಕಾಂಗ್ರೆಸ್‌ನಿಂದ ಕೇಶವ ಸ್ಪರ್ಧಿಸಿದ್ದರು.

Also Read  ನೆಲ್ಯಾಡಿ: ಸುರಿದ ಭಾರೀ ಮಳೆಗೆ ಮನೆಗೆ ಹಾನಿ

error: Content is protected !!
Scroll to Top