ಶಿರ್ವ: ಫಾ. ಮಹೇಶ್ ಡಿಸೋಜ ಆತ್ಮಹತ್ಯೆ ಪ್ರಕರಣ; ಓರ್ವನ ಬಂಧನ

ಶಿರ್ವ, ಫೆ.28: ನಾಲ್ಕು ತಿಂಗಳ ಹಿಂದೆ ನಡೆದ ಶಿರ್ವ ಚರ್ಚ್‌ನಧರ್ಮಗುರು, ಡಾನ್ ಬೋಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ..ಮಹೇಶ್ ಡಿಸೋಜರ ಸಾವಿನ ಪ್ರಕರಣಕ್ಕೆ ಸಂಬಂಸಿ ಮುದರಂಗಡಿ ಗ್ರಾಪಂ ಅಧ್ಯಕ್ಷ, ಪಿಲಾರು ಗ್ರಾಮದ ಡೇವಿಡ್ ಡಿಸೋಜನನ್ನು ಪೊಲೀಸರು ಬಂಧಿಸಿದ್ದಾರೆ.

ಮಹೇಶ್ ಡಿಸೋಜರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ೆರೆನ್ಸಿಕ್ ಡಿಪಾರ್ಟ್‌ಮೆಂಟ್ ನೀಡಿರುವ ಮಹತ್ವದ ಸುಳಿವನ್ನು ಆಧರಿಸಿ ಡೇವಿಡ್ ಡಿಸೋಜರ ವಿರುದ್ಧ ಪ್ರಕರಣದ ತನಿಖಾಕಾರಿಯಾಗಿದ್ದ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಬುಧವಾರ ಮೊಕದ್ದಮೆ ದಾಖಲಿಸಿದ್ದರು. ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ಮಾರ್ಚ್ 11ರತನಕ ನ್ಯಾಯಾಂಗ ಬಂಧನ ವಿಸಿದೆ.

ಮಹೇಶ್ ಡಿಸೋಜರ ಮೃತದೇಹವು 2019ರ ಅಕ್ಟೋಬರ್ 11ರಂದು ತನ್ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವರ ನಿಗೂಢ ಸಾವಿನ ಪ್ರಕರಣದ ಕುರಿತಂತೆ ಹಲವು ಸಂಶಯಗಳು, ಊಹಾಪೋಹಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು. ಸಾವಿನ ಪ್ರಕರಣದ ತೀವ್ರ ತನಿಖೆ ನಡೆಸಿ ಪಾಧರ್ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಶಿರ್ವ ಚರ್ಚ್ ವಠಾರದಲ್ಲಿ ಸೇರಿ ಧರಣಿ ನಡೆಸಿದ್ದರು.

Also Read  ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಾರಂಭ

ಈ ಆತ್ಮಹತ್ಯೆ ಪ್ರಕರಣದ ತನಿಖಾಕಾರಿಯು ತನಿಖೆಯ ವೇಳೆ ಫಾ.ಮಹೇಶ್‌ರ ಮೊಬೈಲ್ ಫೋನ್ ಹಾಗೂ ಇತರ ಸೊತ್ತುಗಳನ್ನು ಸಂಗ್ರಹಿಸಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಅವರಿಂದ ವರದಿ ಪಡೆದು ತನಿಖೆ ಮುಂದುವರಿಸಿದ್ದರು. ಅಕ್ಟೋಬರ್ 11ರಂದು ರಾತ್ರಿ 8:29ರಿಂದ 9:05ರ ನಡುವೆ ಡೇವಿಡ್ ಡಿಸೋಜರ ಪತ್ನಿ ಪ್ರಿಯಾ ಡಿಸೋಜ ಮೊಬೈಲ್‌ ಗೆ ಮೆಸೇಜ್ ಮಾಡಿದ್ದನ್ನು ಆಕ್ಷೇಪಿಸಿ ಫಾ.ಮಹೇಶ್ ಡಿಸೋಜರಿಗೆ ಡೇವಿಡ್ ಕರೆ ಮಾಡಿದ್ದಾನೆ.

ಈ ವೇಳೆ ಮಹೇಶ್‌ರನ್ನು ಅವಾಚ್ಯವಾಗಿ ನಿಂದಿಸಿ ಬೆದರಿಕೆಯೊಡ್ಡಿದ್ದಲ್ಲದೆ, ಅವರ ತಾಯಿಯನ್ನು ಅವಮಾನಿಸಿರುವುದು ಫಾ.ಮಹೇಶ್‌ರ ಮೊಬೈಲ್ ದಾಖಲೆ ಪರಿಶೀಲನೆಯಿಂದ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಡೇವಿಡ್‌ರ ಬೆದರಿಕೆ ಹಾಗೂ ದುಷ್ಪ್ರೇರಣೆಗೆ ಒಳಗಾದ ಫಾ.ಮಹೇಶ್ ಡಿಸೋಜ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಡೆದ ಬಳಿಕ ಆರೋಪಿಯು ತನ್ನ ಪತ್ನಿಯ ಮೊಬೈಲ್‌ನಲ್ಲಿದ್ದ ಪ್ರಕರಣಕ್ಕೆ ಸಂಬಂಧಪಟ್ಟ ಮೆಸೇಜ್‌ಗಳನ್ನು ಡಿಲಿಟ್ ಮಾಡಿ ಸಾಕ್ಷಿ ನಾಶ ಮಾಡಿರುವುದಾಗಿ ತನಿಖಾಧಿಕಾರಿ ಮಹೇಶ್ ಪ್ರಸಾದ್ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Also Read  ಖ್ಯಾತ ವಾಗ್ಮಿ ವಲಿಯುದ್ದೀನ್ ಫೈಝಿ, ನವಂಬರ್ 18-19 ರಂದು ಪಾಜಪಳ್ಳಕ್ಕೆ

error: Content is protected !!
Scroll to Top