ದೇಶ ದ್ರೋಹಿಗಳಿಗೆ ಬಿರಿಯಾನಿ ತಿನ್ನಿಸುವ ಕಾಲ ಮುಗಿಯಿತು ಇನ್ನೇನಿದ್ದರೂ ಕಂಡಲ್ಲಿ ಗುಂಡು ಹೊಡೆಯುವ ಕಾಲ: ಶಾಸಕ ಯತ್ನಾಳ್

ವಿಜಯಪುರ, ಫೆ.26: ದೇಶ ದ್ರೋಹಿಗಳಿಗೆ ಗುಂಡು ಹೊಡೆಯುವ ಕಾರ್ಯ ನಿನ್ನೆಯಿಂದ ಆರಂಭವಾಗಿದೆ. ಪಾಕಿಸ್ತಾನದ ಪರ ಮಾತನಾಡುವ ಮನಸ್ಸುಗಳಿಗೆ ನೇರವಾಗಿ ಜನ್ನತ್‌ಗೆ ಕಳುಹಿಸುವುದಾಗಿ ನಿನ್ನೆ ಹೇಳಿದ್ದೆ. ನಿನ್ನೆಯಿಂದ ದಿಲ್ಲಿಯಲ್ಲಿ ಅದೂ ಕಾರ್ಯಾರಂಭವಾಗಿದೆ. ದೇಶ ವಿರೋಧಿ ಚಟುವಟಿಕೆಗಳಿಗೆ ಜೈಲಿಗೆ ಕಳಿಸಿ ಬಿರಿಯಾನಿ ತಿನ್ನಿಸುವ ಕಾಲ ಮುಗಿಯಿತು. ಇನ್ನೇನಿದ್ದರೂ ಆನ್ ದಿ ಸ್ಪಾಟ್ ಡಿಷಿಶನ್ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿದ್ದು ಪಾಕ್ ಪರ ಪ್ರೀತಿ ತೊರುವ ಪಾಕ್ ಏಜೆಂಟ್ ದೇಶದ್ರೋಹಿಗಳ ಸೇವೆ ಮಾಡಲು ಜನ್ನತ್‌ನಲ್ಲಿರುವ 72 ಕನ್ಯೆಯರು ಕಾಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Also Read  ವಯನಾಡು ಭೂಕುಸಿತ        ಸಂತ್ರಸ್ತರಿಗೆ 25 ಲಕ್ಷ ರೂ. ದೇಣಿಗೆ ನೀಡಿದ ಅಲ್ಲು ಅರ್ಜುನ್

ಅಮೆರಿಕಾ ಆಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮಿಸಿದ್ದ ಕಾರಣ ಪ್ರಧಾನಿ ಮೋದಿ, ಗೃಹ ಸಚಿವ ಅಮೀತ್ ಶಾ ಸುಮ್ಮನಿದ್ದರು. ಟ್ರಂಪ್ ಸ್ವದೇಶಕ್ಕೆ ಮರಳುತ್ತಲೇ ದೇಶದ್ರೋಹಿಗಳ ವಿರುದ್ಧ ಕಾರ್ಯಾಚರಣೆ ಆರಂಭವಾಗಿದೆ. ಈ ಹಿಂದೆ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ನಮ್ಮ ಪೊಲೀಸರು ಗೋಲಿಬಾರ್ ನಂಥ ಕಠಿಣ ನಿರ್ಣಯ ಕೈಗೊಳ್ಳದಿದ್ದರೆ ದಿಲ್ಲಿ ಮಾದರಿಯಲ್ಲಿ ಕರ್ನಾಟಕದಲ್ಲೂ ಹಿಂಸಾಚಾರ ತಾರಕಕ್ಕೆರುತ್ತಿತ್ತು ಎಂದು ಮಂಗಳೂರು ಗೋಲಿಬಾರ್ ಘಟನೆಯನ್ನು ಅವರು ಸಮರ್ಥಿಸಿದರು.

ಕಾಂಗ್ರೆಸ್, ಜೆಡಿಎಸ್ ಮುಖವಾಣಿಯಂತೆ ವರ್ತಿಸುತ್ತಿರುವ ಎಚ್.ಎಸ್. ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ. ಅವರ ನಡವಳಿಕೆ ಏನೆಂದು ಎಲ್ಲರಿಗೂ ಗೊತ್ತು. ಹೀಗಾಗಿ ನನ್ನ ಹೇಳಿಕೆಗೆ ನಾನು ಬದ್ಧವಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ, ಹೇಳಿಕೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಯತ್ನಾಳ್ ಸರ್ಮಥಿಸಿದರು.

error: Content is protected !!
Scroll to Top