ಬೆಳ್ತಂಗಡಿ: ಕ್ಷುಲ್ಲಕ ವಿಚಾರಕ್ಕೆ ಯುವನಿಗೆ ಹಲ್ಲೆ; ದೂರು ದಾಖಲು

ಬೆಳ್ತಂಗಡಿ, ಫೆ.26: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಯುವಕನ ಮೇಲೆ ಮಾರಕಾಯುಧಗಳಿಂದ ಹಲ್ಲೆ ಮಾಡಿರುವ ಘಟನೆ ಬೆಳ್ತಂಗಡಿಯ ರೆಖ್ಯಾ ಗ್ರಾಮದಲ್ಲಿ ನಡೆದಿದೆ.

ಹಲ್ಲೆಗೊಳಗಾದ ಯುವಕ ರೆಖ್ಯಾ ಗ್ರಾಮದ ಕೆಳೆಂಜಿನೋಡಿ ನಿವಾಸಿ ಗಿರೀಶ್ ಗೌಡ (25) ಎಂದು ಗುರುತಿಸಲಾಗಿದೆ. ರೆಖ್ಯಾ ಗ್ರಾಮದ ಕೆಡಂಬಲ ಸಮೀಪದ ಗುಂಡ್ಯ ಹೊಳೆಯಲ್ಲಿ ರೆಖ್ಯಾದ ಯುವಕರ ಗುಂಪೊಂದು ಸ್ನಾನ ಮಾಡುತ್ತಿದ್ದ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ರೆಖ್ಯಾ ಗ್ರಾಮದ ಕಟ್ಟೆ ನಿವಾಸಿಗಳಾದ ವಿಶ್ವನಾಥ ಕೆ.ಎಸ್ ಅಲಿಯಾಸ್ ಚಡ್ಡಿ ಬಾಲ ಮತ್ತು ರಮೇಶ್ ಆಚಾರಿ ಎಂಬವರು ಮದ್ಯ ಸೇವಿಸಿ ಏಕಾಏಕಿ ದಾಂಧಲೆ ಮಾಡಲು ಆರಂಭಿಸಿದ್ದರು.

Also Read  ➤➤ ಕವರ್ ಸ್ಟೋರಿ ದೂರವಾಯಿತು ಕೊಣಾಜೆ ದೂರವಾಣಿ ಸಂಪರ್ಕ..!! ➤ ಕೇಳುವವರು ಯಾರು ಸಾರ್ವಜನಿಕರ ಗೋಳು..? ✍? ಕಿರಣ್ ಕಡಬ

ಈ ಸಂದರ್ಭದಲ್ಲಿ ಇವರನ್ನು ತಡೆಯಲು ಬಂದ ಗಿರೀಶ್ ಗೌಡರ ಮೇಲೆ ಮಾರಕಾಯುಧಗಳಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top