ಉಪ್ಪಿನಂಗಡಿ: ಕಳ್ಳತನ ಮಾಡಲೆಂದು ಮನೆಗೆ ನುಗ್ಗಿ ನಿದ್ದೆಗೆ ಜಾರಿದ ಕಳ್ಳ ➤ ಮನೆ ಮಾಲೀಕನ ಬೆತ್ತದೇಟಿಗೆ ಎದ್ದು ಪೊಲೀಸರ ಅತಿಥಿಯಾದ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.26. ಕಳ್ಳತನ ಮಾಡಲೆಂದು ಮನೆಯ ಒಳನುಗ್ಗಿದ ಕಳ್ಳನೋರ್ವ ನಿದ್ದೆಗೆ ಜಾರಿ ಬೆಳಿಗ್ಗೆ ಸುಲಭವಾಗಿ ಮನೆಯೊಡೆಯನ ಕೈಗೆ ಸಿಕ್ಕಿ ಪೊಲೀಸರ ಅತಿಥಿಯಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯ ಪ್ರಸಿದ್ಧ ಉದ್ಯಮಿಯೋರ್ವರ ಹಳೆಯ ಕಾಲದ ಮನೆಯ ಸುಮಾರು 20 ಅಡಿ ಎತ್ತರದ ಗೋಡೆ ಏರಿ ಒಳ ನುಗ್ಗಿದ ಕಳ್ಳ ಕಪಾಟಿನಲ್ಲಿಟ್ಟಿದ್ದ ಬೀಗದ ಕೀಗಳನ್ನು ಜಾಲಾಡಿ ಮನೆಯ ನಡು ಕೋಣೆಯಲ್ಲಿದ್ದ ದಿವಾನದಲ್ಲಿ ನಿದ್ದೆಗೆ ಜಾರಿದ್ದಾನೆ. ಮುಂಜಾನೆ ಮನೆಯವರು ಎದ್ದು ನೋಡಿದಾಗ ಅಪರಿಚಿತ ವ್ಯಕ್ತಿ ಮಲಗಿರುವುದು ಕಂಡು ಬಂದಿದ್ದು, ಮಲ​ಗಿ​ದಾ​ತ ಕಳ್ಳ ಎಂದು ದೃಢಪಟ್ಟ ಬಳಿಕ ಆತನಿಗೆ ಎರಡೇಟು ನೀಡಿ ಎಬ್ಬಿಸಿದಾಗ ಆತನ ಕೈಯಲ್ಲಿ ಮನೆಯ ಬೀಗದ ಕೀ ಗಳು ಪತ್ತೆಯಾಗಿದೆ. ವಿಚಿತ್ರ ಎಂದರೆ ಕಳ್ಳನು ಮನೆಯ ಹೊರಗಡೆ ಹೋಗಲು ಬಾಗಿಲಿಗೆ ಹಾಕಲಾದ ಚಿಲಕ ಸರಿಸಿದರೆ ಸಾಕಿತ್ತು. ಸುಲಭ ಅವಕಾಶಗಳಿದ್ದಾಗಲೂ ಅದನ್ನು ಮಾಡದೆ ಆತ ನಿದ್ರಿಸಿ​ರು​ವುದು ವಿಸ್ಮಯ ಮೂಡಿಸಿದೆ. ದೈವಿಕ ಶಕ್ತಿಯ ಪ್ರಭಾವದಿಂದ ಇದು ನಡೆದಿದೆ ಎಂದು ಉದ್ಯಮಿ ತಿಳಿಸಿದ್ದಾರೆ.

Also Read  ಪುತ್ತೂರು: ಜ್ಯೂಸ್ ಅಂಗಡಿಯಲ್ಲಿ ಅಗ್ನಿ ಅವಘಡ ➤ ಪೊಲೀಸ್, ಗೃಹರಕ್ಷಕ ಸಿಬ್ಬಂದಿಯಿಂದ ತಪ್ಪಿದ ಅನಾಹುತ

error: Content is protected !!
Scroll to Top