ನಿಮ್ಮ ಬೊಜ್ಜು ದೇಹಕ್ಕೆ ಕಾರಣವಾಗುತ್ತವೆ ಈ ಆಹಾರಗಳು!

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಡಿ.17. ಹೆಚ್ಚಿನವರಿಗೆ ದೇಹ ತೂಕ ಕಡಿಮೆ ಮಾಡುವುದೇ ಚಿಂತೆ. ಅದಕ್ಕೆ ಏನೇನೋ ಡಯಟ್ ಮಾಡುತ್ತಾರೆ. ಆದರೆ ಅದಕ್ಕಿಂತ ಮೊದಲು ಈ ಆಹಾರಗಳ ಸೇವನೆಯನ್ನು ಬಿಡುವುದು ಒಳ್ಳೆಯದು.

ತಂಪು ಪಾನೀಯಗಳು: ಶಾಪಿಂಗ್ ಮಾಲ್ ಗೆ ಹೋದರೆ ರೆಫ್ರಿಜರೇಟರ್ ಒಳಗಿರುವ ಬಣ್ಣ ಬಣ್ಣದ ಜ್ಯೂಸ್ ನಮ್ಮನ್ನು ಆಕರ್ಷಿಸುತ್ತವೆ. ಆದರೆ ಈ ಜ್ಯೂಸ್ ನಿಮ್ಮಲ್ಲಿ ಬೊಜ್ಜು ಬೆಳೆಯಲು ಕಾರಣವಾಗಬಹುದು. ಇದರಲ್ಲಿ ಸುದೀರ್ಘ ಕಾಲ ಬಾಳಿಕೆ ಬರಲು ಹಾಕುವ ರಾಸಾಯನಿಕಗಳು ನಮ್ಮ ದೇಹದಲ್ಲಿ ಬೇಡದ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತವೆ.

Also Read  ಕಡಬ ಮೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ

ಸೋಯಾ ಹಾಲು: ಸೋಯಾ ಹಾಲು ಇತರ ರಾಸಾಯನಿಕಗಳಷ್ಟೇ ಆರೋಗ್ಯಕ್ಕೆ ಹಾನಿಕರ. ಸೋಯಾ ಹಾಲು ನಮ್ಮ ಆರೋಗ್ಯಕ್ಕೆ ಉತ್ತಮ ಎಂದೇ ಪರಿಗಣಿಸಲಾಗುತ್ತದೆ.  ಆದರೆ ತುಂಬಾ ಸಲ ಸಂಸ್ಕರಿಸಲ್ಪಟ್ಟ, ಕಳಪೆ ಗುಣಮಟ್ಟದ ಸೋಯಾ ಹಾಲು ಆರೋಗ್ಯಕ್ಕೆ ಒಳ್ಳೆಯದಲ್ಲ.

ಕೃತಕ ಸಿಹಿ: ಕೃತಕವಾಗಿ ಮಾಡಲಾದ ಸಿಹಿ ವಸ್ತುಗಳೂ ಆರೋಗ್ಯಕ್ಕೆ ಹಾನಿಕಾರಕ. ಇದರಲ್ಲಿ  ನೈಸರ್ಗಿಕವಲ್ಲದ ರಾಸಾಯನಿಕ ಬಳಸಲಾಗುತ್ತದೆ. ಈ ಕೃತಕ ಸಿಹಿ ನಮ್ಮ ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತದೆ.

error: Content is protected !!
Scroll to Top