ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಗೆ ನೂತನ ಸಾರಥ್ಯ ➤ ಅಧ್ಯಕ್ಷರಾಗಿ ಎಫ್.ಎಚ್ ಮಿಸ್ಬಾಹಿ, ಪ್ರ.ಕಾರ್ಯದರ್ಶಿಯಾಗಿ ಮುಸ್ತಫಾ ಯು.ಪಿ ಆಯ್ಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.24. ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಉಪ್ಪಿನಂಗಡಿ ಡಿವಿಶನ್ ಇದರ ವಾರ್ಷಿಕ ಕೌನ್ಸಿಲ್, ಡಿವಿಷನ್ ಅಧ್ಯಕ್ಷರಾಗಿದ್ದ ಮಸ್ ಹೂದ್ ಸಅದಿ ಅಧ್ಯಕ್ಷತೆಯಲ್ಲಿ ಇಲ್ಲಿನ ತಾಜುಲ್ ಉಲಮಾ ಎಜುಕೇಶನಲ್ ಸೆಂಟರ್ ಕರುವೇಲಿನಲ್ಲಿ ನಡೆಯಿತು. ಜಿಲ್ಲಾ ಕಾರ್ಯದರ್ಶಿ ರಶೀದ್ ಹಾಜಿ ವಗ್ಗ ಉದ್ಘಾಟಿಸಿದರು.

ಡಿವಿಷನ್ ಕಾರ್ಯದರ್ಶಿಯಾಗಿದ್ದ ರಹ್ಮಾನ್ ಪದ್ಮುಂಜ ವರದಿ ವಾಚಿಸಿ, ಕೋಶಾಧಿಕಾರಿಯಾಗಿದ್ದ ಎಫ್.ಎಚ್ ಮಿಸ್ಭಾಹಿ ಲೆಕ್ಕ ಪತ್ರ ಮಂಡಿಸಿದರು. ಜಿಲ್ಲಾ ಎಸ್ಸೆಸ್ಸೆಫ್ ಕೋಶಾಧಿಕಾರಿ ಅಲೀ ತುರ್ಕಳಿಕೆ ಸಾಂಘಿಕ ಕಾರ್ಯಚಟುವಟಿಕೆಯ ಕುರಿತಾಗಿ ಮಾತನಾಡಿದರು. ಇದೇ ಸಂದರ್ಭ ವೀಕ್ಷಕರಾಗಿ ಬಂದ ಈಸ್ಟ್ ಝೋನ್ ನಾಯಕ ಝುಬೈರ್ ಸಖಾಫಿ ನೇತೃತ್ವದಲ್ಲಿ ಹಳೇ ಸಮಿತಿಯನ್ನು ಬರ್ಕಾಸ್ತುಗೊಳಿಸಿ ನೂತನ ಸಮಿತಿಯನ್ನು ಆರಿಸಲಾಯಿತು. ಅದರಂತೆ ಅಧ್ಯಕ್ಷರಾಗಿ ಎಫ್. ಎಚ್ ಮುಹಮ್ಮದ್ ಮಿಸ್ಬಾಹಿ
ಉಪಾಧ್ಯಕ್ಷರಾಗಿ ಇಸಾಕ್ ಮದನಿ ಅಳಕೆ ಹಾಗೂ ಲತೀಫ್ ಮಾಸ್ಟರ್ ಸರಳಿಕಟ್ಟೆ
ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ ಯು.ಪಿ
ಜೊತೆ ಕಾರ್ಯದರ್ಶಿಯಾಗಿ ಶರೀಫ್ ಸಖಾಫಿ ಉಜಿರ್ ಬೊಟ್ಟು, ಎಂ.ಎಂ ಮಹ್ ರೂಫ್ ಆತೂರು
ಕೋಶಾಧಿಕಾರಿಯಾಗಿ ಲತೀಫ್ ಕನ್ಯಾರಕೋಡಿ
ಕ್ಯಾಂಪಸ್ ಕಾರ್ಯದರ್ಶಿಯಾಗಿ ಜುನೈದ್ ತುರ್ಕಳಿಕೆ
ಕಾರ್ಯಕಾರಿ ಸದಸ್ಯರುಗಳಾಗಿ ಮಸ್ ಊದ್ ಸಅದಿ ಪದ್ಮುಂಜ, ರಫೀಕ್ ಅಹ್ಸನಿ ಬೋವು, ಶಮೀರ್ ಸಅದಿ, ಹಕೀಂ ಕಳಂಜಿಬೈಲು, ಇಬ್ರಾಹಿಂ ಸಅದಿ, ಅಬ್ದುರ್ರಹಿಮಾನ್ ಪದ್ಮುಂಜ, ರಝಾಕ್ ಸಖಾಫಿ, ರಹೀಂ ಸಖಾಫಿ, ಹಾರಿಸ್ ಸಖಾಫಿ ಕೆಮ್ಮಾರ, ಅಶ್ರಫ್ ಉಜಿರ್ ಬೆಟ್ಟು, ಶರೀಫ್ ಕಲ್ಲಾಜೆ, ಇಕ್ಬಾಲ್ ನೀರಕಟ್ಟೆ, ಮುಸ್ತಫಾ ಸಅದಿ, ಅಶ್ರಫ್ ಮದನಿ, ನಾಸಿರ್ ಮುಈನಿ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕರುವೇಲು ಸಾದಾತ್ ತಂಙಳ್, ಜಿಲ್ಲಾ ಉಪಾಧ್ಯಕ್ಷರಾದ ತೌಸೀಫ್ ಸಅದಿ,ಉಪ್ಪಿನಂಗಡಿ ಡಿವಿಶನ್ ಉಸ್ತುವಾರಿ ಸಿದ್ದೀಕ್ ಪರಪ್ಪು ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಹ್ಮಾನ್ ಪದ್ಮುಂಜ ಸ್ವಾಗತಿಸಿ,ಮುಸ್ತಫಾ ಯು.ಪಿ ವಂದಿಸಿದರು.

Also Read  ಬಂಟ್ವಾಳ ಹೋಮ್ ಕ್ವಾರಂಟೈನ್ ನಿಯಮ ಮೀರಿದಾತನ ವಿರುದ್ಧ ಪ್ರಕರಣ ದಾಖಲು

error: Content is protected !!
Scroll to Top