ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀಗಿರಿಧರ ಭಟ್
9945410150
ಧರ್ಮ ಕ್ಷೇತ್ರವಿದು ನೇತ್ರಾವತಿ ನದಿಯ ದಡದಲ್ಲಿರುವ ಮಂಜುನಾಥಸ್ವಾಮಿ ಆರಾಧಿಸುವ ಪುಣ್ಯಕ್ಷೇತ್ರವಿದು. ಏಳುನೂರು ವರ್ಷಗಳ ಇತಿಹಾಸ ಹೊಂದಿರುವ ದೇಗುಲ ಶ್ರೀವಾದಿರಾಜರಿಂದ ಪ್ರತಿಷ್ಠಾಪನೆಯಾಗಿದೆ ಎಂಬ ಪ್ರತೀತಿ ಉಂಟು. ಈ ಪುಣ್ಯಕ್ಷೇತ್ರದ ಹೆಸರು ಹಿಂದೆ ಕುಡುಮ ಎಂಬುದಾಗಿತ್ತು.
ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ದಂಪತಿಗಳು ನೆಲೆಯಾಗಿದ್ದ ಸ್ಥಳದಲ್ಲಿ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ ಹಾಗೂ ಕನ್ಯಾಕುಮಾರಿ ಧರ್ಮದೇವತೆಗಳು ಇವರ ಮನೆಯಲ್ಲಿ ನೆಲೆನಿಂತರು. ಧರ್ಮದೇವತೆಗಳ ಆಣತಿಯಂತೆ ಅಣ್ಣಪ್ಪಸ್ವಾಮಿಯನ್ನು ಕಳಿಸಿ ಕದ್ರಿ ಇಂದ ಮಂಜುನಾಥನ ಲಿಂಗವನ್ನು ತರಿಸಿ ಪ್ರತಿಷ್ಠಾಪನೆ ನಡೆಸಿದರು.
ಈ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ, ಅನ್ನದಾನ, ವಿದ್ಯಾದಾನ, ಆರೋಗ್ಯ ಇಂತಹ ಪುಣ್ಯದ ಕೆಲಸ ಸಾರ್ವಜನಿಕರಿಗೆ ನಡೆಯುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಸುಕ್ಷೇತ್ರದ ಕೊಡುಗೆ ಅಪಾರವಾದದ್ದು. ಹೆಗ್ಗಡೆ ಕುಟುಂಬದವರು ಇಪ್ಪತ್ತು ತಲೆಮಾರಿನಿಂದ ಕ್ಷೇತ್ರಕ್ಕಾಗಿ ತೊಡಗಿಸಿಕೊಂಡಿದ್ದಾರೆ. ಈಗಿನ ಶ್ರೀ ಡಾ॥ ವೀರೇಂದ್ರ ಹೆಗ್ಗಡೆಯವರು ಕ್ಷೇತ್ರದ ಜವಾಬ್ದಾರಿಯನ್ನು ತೆಗೆದುಕೊಂಡು ಮಂಜುನಾಥ ಸ್ವಾಮಿಯ ಸೇವೆ ಸಲ್ಲಿಸುತ್ತಿರುವುದು ವಿಶೇಷ.
ನ್ಯಾಯ ದೇವತೆಯಾಗಿರುವ ಈ ಸ್ಥಳ ನ್ಯಾಯ ದಾನಕ್ಕೆ ಈ ಕ್ಷೇತ್ರ ಹೆಸರುವಾಸಿ. ಆಣೆ ಪ್ರಮಾಣಗಳು ತಪ್ಪಾದರೆ ಅವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂಬುದು ಈ ಕ್ಷೇತ್ರದ ವಿಶೇಷ. ಹಲವಾರು ಸ್ಥಳದಲ್ಲಿ ಭಕ್ತಾದಿಗಳನ್ನು ಹೊಂದಿರುವ ಮಹಾನ್ ದೈವ ಕ್ಷೇತ್ರ. ನೊಂದವರ ಕಷ್ಟಕಾರ್ಪಣ್ಯಗಳನ್ನು ಮಂಜುನಾಥಸ್ವಾಮಿ ಬಗೆಹರಿಸಿ ಕೈಹಿಡಿದು ನಡೆಸುವರು. ನೀವು ಸಹ ಅತಿಯಾದ ಕಷ್ಟಗಳಿಂದ ನೊಂದಿದ್ದರೆ ಖಂಡಿತ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ.
ಶುಭಮಸ್ತು
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
9945410150