ಅಂಕಾರಾ, ಫೆ.24: ಪಶ್ಚಿಮ ಇರಾನ್ನಲ್ಲಿ ರವಿವಾರ ಬೆಳಗ್ಗೆ ಸಂಭವಿಸಿದ ಭೂಕಂಪದಲ್ಲಿ 9 ಮಂದಿ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ.
ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.7ರಷ್ಟಿತ್ತು. ಇರಾನ್ನ ಖೋಯ್ ಮತ್ತು ಟರ್ಕಿಯ ವ್ಯಾನ್ ಪ್ರಾಂತ್ಯದಲ್ಲಿ ಈ ಸಾವುನೋವು ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತರಲ್ಲಿ ಮೂವರು ಮಕ್ಕಳೂ ಸೇರಿದ್ದು, ಇವರು ಟರ್ಕಿಯ ಬಸ್ಕಾಲೆ ಜಿಲ್ಲೆಯವರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.