ಪುತ್ತೂರು: ಕೊಲೆಗೆ ಸಂಚು; ಇಬ್ಬರ ಬಂಧನ

ಪುತ್ತೂರು, ಫೆ.23: ಆಸ್ತಿ ಹಾಗೂ ವ್ಯವಹಾರದ ಮನಸ್ತಾಪದಿಂದಾಗಿ ಜಯರಾಮ ಎಂಬವರ ಹತ್ಯೆ ಮಾಡಲು ಸಂಚು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಹೇಶ್ ಹಾಗೂ ನಾಸೀರ್ ಇಡಬೆಟ್ಟು ಎಂದು ಗುರುತಿಸಲಾಗಿದೆ.

ಜಯರಾಮ ಹಾಗೂ ಮಹೇಶ್ ಅಲಿಯಾಸ್ ಮಾಯಿಲಪ್ಪಅವರು ಸಹೋದರರಾಗಿದ್ದು, ಪಾಲುದಾರಿಕೆಯಲ್ಲಿ ಹೋಮ್ ಪ್ರೋಡಕ್ಟ್ ವ್ಯವಹಾರ ನಡೆಸುತ್ತಿದ್ದರು. ಇದರಲ್ಲಿ ಅವರೊಳಗೆ ಉಂಟಾಗಿದ್ದ ವೈಮನಸ್ಸು ಹಾಗೂ ಕುಟುಂಬದ ಆಸ್ತಿ ವಿಚಾರವಾಗಿ ಉಂಟಾದ ಮನಸ್ತಾಪದಿಂದಾಗಿ ಮಹೇಶ್ ನಾಸೀರ್ ಅಲಿಯಾಸ್ ಮುನ್ನಿ ಎಂಬವನೊಂದಿಗೆ ಸೇರಿ ಜಯರಾಮ ಅವರನ್ನು ಹತ್ಯೆ ಮಾಡಲು ಸಂಚು ಹೂಡಿದ್ದಾನೆ. ಹಾಗೆಯೇ ವೀರಮಂಗಳದ ನಿವಾಸಿ ಮುಹಮ್ಮದ್ ಹಾರಿಸ್ ಮೂಲಕ ಹತ್ಯೆ ಮಾಡಲು ಪ್ರೇರೇಪಣೆ ನೀಡಿದ್ದಾನೆ ಎಂದು ಜಯರಾಮ ಅವರು ದೂರು ನೀಡಿದ್ದರು.

Also Read  ಪಂಜ: ಕೆಎಸ್ಸಾರ್ಟಿಸಿ ಬಸ್ - ಸ್ವಿಫ್ಟ್ ಡಿಸೈರ್ ಕಾರು ಢಿಕ್ಕಿ ► ಓರ್ವ ಗಂಭೀರ, ಹಲವರಿಗೆ ಗಾಯ

ಈ ದೂರಿನ ಅನ್ವಯ ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹಣದ ವ್ಯವಹಾರದ ದಾಖಲೆಗಳನ್ನು ಪಡೆದು ಇಬ್ಬರು ಆರೋಪಿಗಳನ್ನು ಬಂಧನ ಮಾಡಿ, ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಕುರಿತಾಗಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top