ಇಂದು ಆತೂರಿನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನಾ ಸಮಾವೇಶ

(ನ್ಯೂಸ್ ಕಡಬ) newskadaba.com ಕಡಬ, ಫೆ.23. ಸಂವಿಧಾನ ಸಂರಕ್ಷಣಾ ಒಕ್ಕೂಟ ಆತೂರು ಇದರ ಆಶ್ರಯದಲ್ಲಿ ಕೇಂದ್ರ ಸರಕಾರದ ಪೌರತ್ವ ನೀತಿ ವಿರೋಧಿಸಿ ಬೃಹತ್ ಪ್ರತಿಭಟನಾ ಸಮಾವೇಶವು ಇಂದು ಮಧ್ಯಾಹ್ನ 02:30 ಕ್ಕೆ ಆತೂರು ಜಂಕ್ಷನ್ ನಲ್ಲಿ ನಡೆಯಲಿದೆ.

ಪ್ರಮುಖ ಭಾಷಣಕಾರರಾಗಿ ಮಾಜಿ ಶಾಸಕರಾದ Y.S.ದತ್ತ, C. ದ್ವಾರಕನಾಥ್, ಭಾಸ್ಕರ್ ಪ್ರಸಾದ್ ಬೆಂಗಳೂರು, ಶಶಿಧರ್ ಭಟ್, ಸುಧೀರ್ ಕುಮಾರ್ ಮುರೋಳಿ, U.T.ಖಾದರ್ ಗವಹಿಸಲಿದ್ದಾರೆ‌. ಮುಖ್ಯ ಅತಿಥಿಗಳಾಗಿ ಫಾ| ವಿಲಿಯಂ ಮಾರ್ಟಿಸ್, ಬಹು. ಸುಫ್ಯಾನ್ ಸಖಾಫಿ, ಬಹು.ಅನೀಸ್ ಕೌಸರಿ, ಜ.ರಿಯಾಝ್ ಫರಂಗಿಪೇಟೆ, K.T. ಮಧುಸೂದನ ಗೌಡ, ಇಬ್ರಾಹಿಮ್ ಖಲೀಲ್, ಹಾಜಿ ಮೀರಾನ್ ಸಾಹೇಬ್, ಮುಸ್ತಫಾ ಕೆಂಪಿ ಉಪಸ್ಥಿತರಿರಲಿದ್ದಾರೆ.

Also Read  ದ.ಕ ಜಿಲ್ಲಾ ಪೊಲೀಸ್ ಘಟಕದ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿರುವ ಹಳೆಯ ಮತ್ತು ನಿರುಪಯುಕ್ತ ಸಾಮಾಗ್ರಿಗಳಬಹಿರಂಗ ಹರಾಜು

ಹಲವಾರು ಸಾಮಾಜಿಕ ಹೋರಾಟಗಾರರು,ಪ್ರಗತಿಪರ ಚಿಂತಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಜಾತ್ಯತೀತ ಮುಖಂಡರು, ಸಮಾನ ಮನಸ್ಕ ನಾಗರಿಕರು, ಯುವಕರು, ಸಾಮಾಜಿಕ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top